ಕುಟುಂಬ ಸಮೇತ ಸಚಿವ ಖಾದರ್ ಉಮ್ರಾ ಯಾತ್ರೆ

ಮಂಗಳೂರು, ಎ.10: ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತನ್ನ ಕುಟುಂಬ ಸಮೇತ ಸೋಮವಾರ ರಾತ್ರಿ ಉಮ್ರಾ ಯಾತ್ರೆ ಕೈಗೊಳ್ಳಲಿದ್ದಾರೆ. ರಾತ್ರಿ ಸುಮಾರು 7:30ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ಯಾತ್ರೆ ಕೈಗೊಳ್ಳುವ ಸಚಿವ ಖಾದರ್ ಜೊತೆ ಕುಟುಂಬದ ಇತರ 15 ಮಂದಿ ಸದಸ್ಯರೂ ತೆರಳಲಿದ್ದಾರೆ.
ಎ.13ರಂದು ಗುಂಡ್ಲುಪೇಟೆ ಉಪಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲಿದ್ದು, ಅಂದು ಖಾದರ್ ಕೇರಳ ಮೂಲಕ ಗುಂಡ್ಲುಪೇಟೆಗೆ ಮರಳಲಿದ್ದಾರೆ. ಅಗತ್ಯ ಸಂದರ್ಭ ಸಾರ್ವಜನಿಕರು ತನ್ನ ಆಪ್ತ ಸಹಾಯಕರನ್ನು (ಮೊ.ಸಂ. 7026777777, 9343346439, 9242474777) ಸಂಪರ್ಕಿಸಬಹುದು ಎಂದು ಸಚಿವ ಖಾದರ್ ತಿಳಿಸಿದ್ದಾರೆ.
Next Story





