ಶಾಸಕರ ಅನುದಾನ ಬಿಡುಗಡೆ
ಶಾಸಕರ ಅನುದಾನ ಬಿಡುಗಡೆ
ಮಂಗಳೂರು, ಎ.10: ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಶಾಸಕ ಬಿ. ರಮಾನಾಥ ರೈ 2016-17ನೆ ಸಾಲಿನ ಅನುದಾನದಲ್ಲಿ ಬಡಗಬೆಳ್ಳೂರು ಗ್ರಾಮಗುರು ಮಂದಿರದ ಬಳಿ ಹೈಮಾಸ್ಟ್ ದೀಪ ಅಳವಡಿಸಲು 1 ಲಕ್ಷ ರೂ., ಮಾಣಿ ಗ್ರಾಮ ಸೂರಿ ಕುಮೇರು ಮಸೀದಿಯ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷ ರೂ., ಕಳ್ಳಿಗೆ ಗ್ರಾಮದ ಕಲ್ಪನೆ ಸಾರ್ವಜನಿಕ ಬಸ್ ತಂಗುದಾಣದ ಬಳಿ ಇಂಟರ್‌ಲಾಕ್ ಅಳವಡಿಸಲು 5 ಲಕ್ಷ ರೂ., ಕಾವಳಪಡೂರು ಗ್ರಾಮದ ಮದ್ದ ಬಳಿ ಹೈಮಾಸ್ಟ್ ದೀಪ ಅಳವಡಿಸಲು 1 ಲಕ್ಷ ರೂ., ತೆಂಕಬೆಳ್ಳೂರು ಗ್ರಾಮದ ಕಾವೇಶ್ವರ ದೇವಸ್ಥಾನದ ಬಳಿ ಹೈಮಾಸ್ಟ್ ದೀಪ ಅಳವಡಿಸಲು 1 ಲಕ್ಷ ರೂ., ಕಳ್ಳಿಗೆ ಗ್ರಾಮ ದರಿಬಾಗಿಲು ಎಂಬಲ್ಲಿ ಹೈಮಾಸ್ಟ್ ದೀಪ ಅಳವಡಿಸಲು 1 ಲಕ್ಷ ರೂ., ಮಂಚಿ ಗ್ರಾಮದ ಸುಳ್ಯ ದೇವಸ್ಥಾನ ಬಳಿ ರಸ್ತೆ ಡಾಮರೀಕರಣ ಕಾಮಗಾರಿಗೆ 5 ಲಕ್ಷ ರೂ., ಚೆನೈತ್ತೋಡಿ ಗ್ರಾಮದ ಹೊಸಂಗಡಿ ಕಳಸಡ್ಕ ರಸ್ತೆ ಡಾಮರೀಕರಣ ಕಾಮಗಾರಿಗೆ 5 ಲಕ್ಷ ರೂ., ಸಜೀಪ ಮುನ್ನೂರು ಗ್ರಾಮದ ಉದ್ದೊಟ್ಟು ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ 5 ಲಕ್ಷ ರೂ., ನರಿಕೊಂಬು ಗ್ರಾಮದ ಕರ್ಬೆಟ್ಟು ಹೊಸ ಲಚ್ಚಿಲ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷ ರೂ. ಅನುದಾನವನ್ನು ಮಂಜೂರುಗೊಳಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.





