ಕಾನೂನು ಮಾಹಿತಿ ಶಿಬಿರ

ಕಾನೂನು ಮಾಹಿತಿ ಶಿಬಿರ
ಮಂಗಳೂರು, ಎ.10: ‘ಶ್ರಮ ಸಂಭ್ರಮ’ದ ಸ್ವಾಗತ ಸಮಿತಿಯ ನೇತೃತ್ವದಲ್ಲಿ ನಗರದ ಶಕ್ತಿನಗರ ಮೆಕಾಲೆ ಭವನದಲ್ಲಿ ರವಿವಾರ ನಡೆದ ಕಾರ್ಮಿಕರ ಸಮ್ಮಿಲನದಲ್ಲಿ ಕಾನೂನು ಮಾಹಿತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಸ್ವಾಗತ ಸಮಿತಿಯ ಗೌರವಾಧ್ಯಕ್ಷ ರಾಯ್ ಕ್ಯಾಸ್ಟಲಿನೊ ಮಾತನಾಡುತ್ತಾ, ಸಾಮಾನ್ಯ ಜನರಲ್ಲಿ ಕಾನೂನಿನ ಅರಿವು ಇದ್ದರೆ ಯಾವುದೇ ಸಂದರ್ಭದಲ್ಲಿ ಮಾತನಾಡುವಾಗ ಅಂಜಿಕೆ ಇರುವುದಿಲ್ಲ. ಆದ್ದರಿಂದ ಕನಿಷ್ಠ ಕಾನೂನು ತಿಳಿಯಲು ಇಂತಹ ಕಾನೂನು ಮಾಹಿತಿ ಶಿಬಿರಗಳ ಅಗತ್ಯವಿದೆ ಎಂದರು.
ಕಾನೂನು ಮಾಹಿತಿ ಶಿಬಿರದಲ್ಲಿ ಅಖಿಲ ಭಾರತ ವಕೀಲರ ಸಂಘದ ಅಧ್ಯಕ್ಷ ಯಶವಂತ ಮರೋಳಿ, ಸಂವಿಧಾನದಲ್ಲಿರುವ ಕಾನೂನಿನಲ್ಲಿ ಜನಸಾಮಾನ್ಯರು ಎಂಬ ವಿಷಯದ ಕುರಿತು ಮಾಹಿತಿ ನೀಡಿದರು. ವಕೀಲ ರಾಮಚಂದ್ರ ಬಬ್ಬುಕಟ್ಟೆ ಮಾತನಾಡುತ್ತಾ, ಬಳಕೆದಾರರಿಗೆ ಇರುವ ಕಾನೂನು ಮಾಹಿತಿ, ವಾಹನ ಸವಾರರಿಗೆ ಇರುವ ಮೋಟಾರ್ ಆ್ಯಕ್ಟ್ ಬಗ್ಗೆ, ಸೈಬರ್ ಕ್ರೈಂ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರು.
Next Story





