ರಾಜ್ಯದ ಜನತೆಗೆ ನಾಳೆ ವಿದ್ಯುತ್ ಶಾಕ್?

ಬೆಂಗಳೂರು, ಎ.10: ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲ, ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ರಾಜ್ಯ ಸರಕಾರವು ಜನತೆಗೆ ಮಂಗಳವಾರ ವಿದ್ಯುತ್ ಶಾಕ್ ನೀಡುವ ಸಾಧ್ಯತೆಯಿದೆ.
ಬೆಸ್ಕಾಂ, ಮೆಸ್ಕಾಂ, ಹೆಸ್ಕಾಂ, ಚೆಸ್ಕಾಂ ಸೇರಿದಂತೆ ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಕಂಪೆನಿಗಳು, ವಿದ್ಯುತ್ ವಿತರಣಾ ಪರವಾನಗಿದಾರರು ಇತ್ತೀಚೆಗಷ್ಟೆ ವಿದ್ಯುತ್ ದರ ಪರಿಷ್ಕರಣೆ ಮಾಡುವಂತೆ ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದವು.
ವಿದ್ಯುತ್ ಸರಬರಾಜು ಕಂಪೆನಿಗಳು ಹಾಗೂ ವಿದ್ಯುತ್ ವಿತರಣಾ ಪರವಾನಗಿದಾರರು ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲನೆ ನಡೆಸಿರುವ ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು 2017-18ನೆ ಸಾಲಿನ ವಿದ್ಯುತ್‌ಚ್ಛಕ್ತಿ ದರ ಪರಿಷ್ಕರಣೆ ಸಂಬಂಧ ಮಂಗಳವಾರ ಬೆಳಗ್ಗೆ 11.30ಕ್ಕೆ ತನ್ನ ಆದೇಶ ಪ್ರಕಟಿಸಲಿದೆ.
Next Story





