ದಕ್ಷಿಣ ಸುಡಾನ್ ಕ್ಷಾಮ : ಎಲೆಗಳನ್ನು ತಿಂದು ಬದುಕುತ್ತಿರುವ ಜನರು

ನೈರೋಬಿ, ಎ. 10: ದಕ್ಷಿಣ ಸುಡಾನ್‌ನಲ್ಲಿ ಬರಪೀಡಿತ ಎಂದು ಘೋಷಣೆಯಾಗದ ಪ್ರದೇಶಗಳಲ್ಲಿ ಆಹಾರ ದಾಸ್ತಾನು ಮುಗಿದಿದ್ದು, ಜನರು ಮರಗಳ ಎಲೆಗಳು ಮತ್ತು ಬಿತ್ತನೆ ಬೀಜಗಳನ್ನು ತಿನ್ನುತ್ತಿದ್ದಾರೆ ಎಂದು ಮಾನವೀಯ ನೆರವು ಗುಂಪೊಂದು ಸೋಮವಾರ ಹೇಳಿದೆ.
ದೇಶದ ಉತ್ತರ ಭಾಗದಲ್ಲಿರುವ ಅವೇಲ್ ಸೆಂಟರ್ ಕೌಂಟಿಯ ಹೊರವಲಯದ ಗ್ರಾಮಗಳು ಬರದ ದವಡೆಗೆ ಸಿಲುಕಿಕೊಂಡಿವೆ ಎಂದು ನಾರ್ವೇಜಿಯನ್ ರೆಫ್ಯೂಜೀ ಕೌನ್ಸಿಲ್ (ಎನ್‌ಆರ್‌ಸಿ) ಹೇಳಿದೆ.
ದೇಶದ ಪೂರ್ವದಲ್ಲಿರುವ ಎರಡು ಕೌಂಟಿಗಳನ್ನು ಫೆಬ್ರವರಿಯಲ್ಲಿ ಬರಪೀಡಿತ ಎಂಬುದಾಗಿ ಘೋಷಿಸಲಾಗಿತ್ತು.
‘‘ಈ ಗ್ರಾಮಗಳ ಜನರು ಬದುಕುಳಿಯುವುದಕ್ಕಾಗಿ ತಿನ್ನಲಸಾಧ್ಯವಾದ ಕಾಡಿನ ಆಹಾರಗಳನ್ನು ತಿನ್ನುತ್ತಿದ್ದಾರೆ’’ ಎಂದು ಎನ್‌ಆರ್‌ಸಿಯ ದಕ್ಷಿಣ ಸುಡಾನ್ ದೇಶ ನಿರ್ದೇಶಕಿ ರೆಹಾನಾ ಝವಾರ್ ಹೇಳಿದರು.
ಲೀರ್ ಮತ್ತು ಮೇಯಂಡಿಟ್ ಕೌಂಟಿಗಳಲ್ಲಿ ಸುಮಾರು 1 ಲಕ್ಷ ಜನರು ಬರದ ದವಡೆಗೆ ಸಿಲುಕಿದ್ದಾರೆ.ಮುಂದಿನ ತಿಂಗಳುಗಳಲ್ಲಿ ಇನ್ನೂ 10 ಲಕ್ಷ ಮಂದಿ ಬರದ ದವಡೆಗೆ ಸಿಲುಕುವ ಅಪಾಯದ ಬಗ್ಗೆ ನೆರವು ಸಂಸ್ಥೆಗಳು ಎಚ್ಚರಿಕೆ ನೀಡಿವೆ.
Next Story







