ಈಜಿಪ್ಟ್ ಸ್ಫೋಟಗಳಿಗೆ ಪೋಪ್ ಖಂಡನೆ

ವ್ಯಾಟಿಕನ್ ಸಿಟಿ, ಎ. 10: ಈಜಿಪ್ಟ್‌ನ ಎರಡು ಚರ್ಚ್‌ಗಳಲ್ಲಿ ನಡೆದ ಭೀಕರ ದಾಳಿಗಳನ್ನು ಪೋಪ್ ಫ್ರಾನ್ಸಿಸ್ ಖಂಡಿಸಿದ್ದಾರೆ.
ರವಿವಾರ ‘ಪಾಮ್ ಸಂಡೇ’ ಸಂದರ್ಭದಲ್ಲಿ ಪ್ರಾರ್ಥನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಜಗತ್ತು ಯುದ್ಧಗಳು, ಭಯೋತ್ಪಾದನೆ ಮತ್ತು ‘ಶಸ್ತ್ರಸಜ್ಜಿತ ಹಾಗೂ ದಾಳಿಗೆ ಸಿದ್ಧವಾಗಿರುವ’ ಹಿತಾಸಕ್ತಿಗಳಿಂದ ಬಳಲುತ್ತಿದೆ ಎಂದು ಹೇಳಿದರು.
‘‘ಮೃತಪಟ್ಟವರು ಹಾಗೂ ಸಂತ್ರಸ್ತರಿಗಾಗಿ ನಾನು ಪ್ರಾರ್ಥಿಸುತ್ತೇನೆ. ಭಯೋತ್ಪಾದನೆ, ಹಿಂಸೆ ಮತ್ತು ಸಾವನ್ನು ಬಿತ್ತುವ ಜನರ ಹಾಗೂ ಶಸ್ತ್ರಗಳನ್ನು ನಿರ್ಮಿಸಿ ಸಾಗಿಸುವ ಜನರ ಹೃದಯಗಳನ್ನು ಪರಿವರ್ತನೆ ಮಾಡುವಂತೆ ನಾನು ದೇವರನ್ನು ಪ್ರಾರ್ಥಿಸುತ್ತೇನೆ’’ ಎಂದರು.
Next Story





