ಮಹಾರಾಷ್ಟ್ರದಲ್ಲಿ ವ್ಯಾಪಕಗೊಂಡ ಹಂದಿ ಜ್ವರ
100ರ ಗಡಿ ದಾಟಿದ ಸಾವಿನ ಸಂಖ್ಯೆ

ಮುಂಬೈ, ಎ.10: ಮಹಾರಾಷ್ಟ್ರದಲ್ಲಿ ಹಂದಿ ಜ್ವರ ಕಳೆದೆರಡು ತಿಂಗಳಿನಿಂದ ವ್ಯಾಪಕವಾಗಿ ಹಬ್ಬಿದ್ದು ಹಾಲಿ ವರ್ಷದಲ್ಲಿ ಈ ರೋಗಕ್ಕೆ ಬಲಿಯಾದವರ ಸಂಖ್ಯೆ 100ರ ಗಡಿ ದಾಟಿದೆ. ಎಚ್1ಎನ್1(ಹಂದಿ ಜ್ವರ) ರೋಗದ ಲಕ್ಷಣ ಕಂಡು ಬಂದಲ್ಲಿ ತಕ್ಷಣ ವೈದ್ಯರ ಬಳಿ ತೆರಳುವಂತೆ ಸರಕಾರ ಜನರಿಗೆ ಸೂಚಿಸಿದೆ.
ಈ ವರ್ಷ ಈ ರೋಗಕ್ಕೆ ಬಲಿಯಾದವರ ಸಂಖ್ಯೆ 101ಕ್ಕೇರಿದೆ ಎಂದು ಆರೋಗ್ಯಾಧಿಕಾರಿ ಡಾ. ಪ್ರದೀಪ್ ಅವಾಟೆ ತಿಳಿಸಿದ್ದಾರೆ. ಜನವರಿ 1ರಿಂದ ಎಪ್ರಿಲ್ 9ರವರೆಗಿನ ಅವಧಿಯಲ್ಲಿ 101 ಜನ ಬಲಿಯಾಗಿದ್ದಾರೆ. ಪುಣೆಯಲ್ಲಿ ಅತೀ ಹೆಚ್ಚಿನ (32 ಮಂದಿ) ಸಂಖ್ಯೆಯಲ್ಲಿ ಮರಣ ಸಂಭವಿಸಿದ್ದರೆ, ನಾಸಿಕ್‌ನಲ್ಲಿ 20 ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಮಾರ್ಚ್ ಮತ್ತು ಎಪ್ರಿಲ್‌ನಲ್ಲಿ ಉಷ್ಣತೆ ಹೆಚ್ಚಿದ ಕಾರಣ ಹಂದಿ ಜ್ವರದ ಪ್ರಕರಣವೂ ಹೆಚ್ಚಿದೆ. ಈ ರೋಗಲಕ್ಷಣ ಕಂಡು ಬಂದರೆ ಹೆಚ್ಚಿನ ವಿಶ್ರಾಂತಿ ಅಗತ್ಯ. ಸಾಕಷ್ಟು ಮುಂಜಾಗರೂಕತೆ ಕ್ರಮವೂ ಅಗತ್ಯವಾಗಿದೆ. ತಕ್ಷಣ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯಬೇಕು ಎಂದವರು ತಿಳಿಸಿದ್ದಾರೆ.
Next Story