ಸೌದಿ ನಾಗರಿಕರಿಗೆ ಆದಾಯ ತೆರಿಗೆಯಿಲ್ಲ : ಸಚಿವ

ದೋಹಾ, ಎ. 10: ಸೌದಿ ಅರೇಬಿಯದಲ್ಲಿ ಜಾರಿಗೆ ತರಲಾಗುತ್ತಿರುವ ತೀವ್ರ ಆರ್ಥಿಕ ಸುಧಾರಣೆಗಳ ಹೊರತಾಗಿಯೂ ಸೌದಿ ನಾಗರಿಕರಿಂದ ಆದಾಯ ತೆರಿಗೆಯನ್ನು ಸಂಗ್ರಹಿಸಲಾಗುವುದಿಲ್ಲ ಹಾಗೂ ಸೌದಿ ಕಂಪೆನಿಗಳ ಲಾಭಕ್ಕೆ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಆ ದೇಶದ ಹಣಕಾಸು ಸಚಿವ ಮುಹಮ್ಮದ್ ಅಲ್-ಜದಾನ್ ರವಿವಾರ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
2014ರಲ್ಲಿ ತೈಲ ಬೆಲೆ ಕುಸಿದ ಹಿನ್ನೆಲೆಯಲ್ಲಿ ಸೌದಿ ಅರೇಬಿಯವು ತನ್ನ ಆರ್ಥಿಕತೆಗೆ ಬಹಳಷ್ಟು ಸುಧಾರಣೆಗಳನ್ನು ತಂದಿದೆ.
Next Story





