ಬಶರ್ ನಿಯಂತ್ರಿಸಲು ರಶ್ಯಕ್ಕೆ ಅಮೆರಿಕ ಒತ್ತಡ

ವಾಶಿಂಗ್ಟನ್, ಎ. 10: ಸಿರಿಯದ ಅಧ್ಯಕ್ಷ ಬಶರ್ ಅಸದ್‌ರನ್ನು ನಿಯಂತ್ರಿಸುವಂತೆ ಅಮೆರಿಕ ರವಿವಾರ ರಶ್ಯದ ಮೇಲೆ ಒತ್ತಡವನ್ನು ಹೇರಿದೆ. ಅದೇ ವೇಳೆ, ಸಿರಿಯದ ವಿರುದ್ಧ ದಾಳಿ ನಡೆಸುವ ಯಾವುದೇ ದೇಶದ ವಿರುದ್ಧ ಪ್ರತೀಕಾರ ತೆಗೆದುಕೊಳ್ಳುವುದಾಗಿ ಸಿರಿಯದ ಮಿತ್ರಪಕ್ಷಗಳು ಎಚ್ಚರಿಕೆ ನೀಡಿವೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್ ಈ ವಾರ ರಶ್ಯದ ರಾಜಧಾನಿ ಮಾಸ್ಕೋದಲ್ಲಿ ರಶ್ಯದ ವಿದೇಶ ಸಚಿವ ಸರ್ಗಿ ಲವ್ರೊವ್‌ರನ್ನು ಭೇಟಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಉಭಯ ದೇಶಗಳು ಸಿರಿಯಕ್ಕೆ ಸಂಬಂಧಿಸಿ ಮಾತುಕತೆ ನಡೆಸಲಿವೆ.
Next Story





