ಪಡುತೋನ್ಸೆ; ಅಕ್ರಮ ಮರಳುಗಾರಿಕೆಗೆ ದಾಳಿ

ಉಡುಪಿ, ಎ.10: ಪಡುತೋನ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡು ತೋನ್ಸೆ ಹೊಳೆ ಸಮೀಪ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ದಾಳಿ ನಡೆಸಿದ ಟಾಸ್ಕ್‌ಫೋರ್ಸ್ ಕಮಿಟಿಯು ಎರಡು ಯುನಿಟ್ ಮರಳನ್ನು ವಶ ಪಡಿಸಿಕೊಂಡಿದೆ.
ಕಳೆದ ಹಲವು ಸಮಯದಿಂದ ಇಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಈ ಬಗ್ಗೆ ಹೊಯ್ಗೆ ಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷ ಗುರುವ ಸುವರ್ಣ ಗ್ರಾಪಂಗೆ ದೂರು ನೀಡಿದ್ದರು. ಅದರಂತೆ ಗ್ರಾಮ ಲೆಕ್ಕಿಗರಾದ ರೇಶ್ಮಾ ಹಾಗೂ ಟಾಸ್ಕ್‌ಪೋರ್ಸ್ ಕಮಿಟಿಯ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಅದರಂತೆ ಸ್ಥಳದಲ್ಲಿ ದೊರೆತ ಎರಡು ಯುನಿಟ್ ಮರಳನ್ನು ವಶಪಡಿಸಿಕೊಳ್ಳ ಲಾಗಿದೆ. ಈ ದಾಳಿಯಲ್ಲಿ ಉಡುಪಿ ಲೋಕೊಪಯೋಗಿ ಇಲಾಖೆ ಜೂನಿ ಯರ್ ಇಂಜಿನಿಯರ್ ಸೋಮನಾಥ್, ಚಾಲಕ ಎಚ್.ಆರ್.ಖಾನ್ ಭಾಗವಹಿಸಿದ್ದರು.
Next Story





