ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಂತರ್ ಕಾಲೇಜು ತಾಂತ್ರಿಕ ಉತ್ಸವ

ಮಂಗಳೂರು, ಎ.10: ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ), ಮಂಗಳೂರು ಇದರ ಆಶ್ರಯದಲ್ಲಿ ಅಂತರ್‌ಕಾಲೇಜು ತಾಂತ್ರಿಕ ಉತ್ಸವ- ಎನಿಗ್ಮಾ 2ಕೆ17 -ವನ್ನು ಹಮ್ಮಿಕೊಳ್ಳಲಾಗಿತ್ತು. ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್‌ನ ಟ್ರಸ್ಟಿ ಮಝರ್ ಎಸ್.ಬ್ಯಾರಿ ಕಾರ್ಯಕ್ರಮ ಉದ್ಘಾಟಿಸಿದರು. ಬಿಐಟಿ ಪ್ರಾಂಶುಪಾಲ ಡಾ. ಅಬ್ದುಲ್ ಕರೀಂ ಅಧ್ಯಕ್ಷತೆ ವಹಿಸಿದ್ದರು. ಬ್ಯಾರೀಸ್ ಎನ್‌ವೈರೊ -ಆರ್ಕಿಟೆಕ್ಚರ್ ಡಿಸೈನ್ ಶಾಲೆಯ ಪ್ರಾಂಶುಪಾಲ ಪ್ರೊ.ಭವೇಶ್ ಮೆಹ್ತಾ, ಬಿಐಟಿ ಪಾಲಿಟೆಕ್ನಿಕ್ ಕಾಲೇಜಿನ ನಿರ್ದೇಶಕ ಡಾ. ಅಝೀಝ್ ಮುಸ್ತಫಾ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.
12 ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯ 18 ಇಂಜಿನಿಯರಿಂಗ್ ಕಾಲೇಜಿನ 300ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿಜೇತರಿಗೆ ಮಝರ್ ಎಸ್. ಬ್ಯಾರಿ ಬಹುಮಾನ ವಿತರಿಸಿದರು.
ಬಹುಮಾನ ವಿಜೇತರ ವಿವರ:
1. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ
3ಡಿ ಮೋಡೆಲಿಂಗ್:
ಪ್ರಥಮ- ಮಂಜುನಾಥ್, ಪಿ.ಎ.ಕಾಲೇಜ್ ಆಫ್ ಇಂಜಿನಿಯರಿಂಗ್, ಮಂಗಳೂರು.
ದ್ವಿತೀಯ- ಜಾಫರ್ ಸಾದಿಕ್, ಬಿಐಟಿ ಮಂಗಳೂರು.
ಮಿಚಾರ್ಟ್:
ಪ್ರಥಮ- ಶರತ್, ಸಂಜು- ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ವಳಚ್ಚಿಲ್.
ದ್ವಿತೀಯ- ಆಸಿಫ್, ಶೆರೀನ್ ಮತ್ತು ಗೀತ್‌ಚಂದ್- ಬ್ಯಾರೀಸ್ ಎನ್‌ವೈರೊ -ಆರ್ಕಿಟೆಕ್ಚರ್ ಡಿಸೈನ್ ಶಾಲೆ, ಮಂಗಳೂರು.
ಪೇಪರ್ ಪ್ರಸ್ತುತಿ:
ಪ್ರಥಮ- ಮಯೂರ್ ಎಂ, ಎಸ್‌ಎಂವಿಐಟಿ, ಉಡುಪಿ.
ದ್ವಿತೀಯ- ಗಣೇಶ್ ನಾಯಕ್, ಕೆನರಾ ಇಂಜಿನಿಯರಿಂಗ್ ಕಾಲೇಜು, ಬಂಟ್ವಾಳ.
2. ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗ:
ರೊಬೋಥಾನ್:
ಪ್ರಥಮ- ಮೆಲ್ವಿನ್ ಲೋಬೋ- ಸಹ್ಯಾದ್ರಿ ಕಾಲೇಜು, ಮಂಗಳೂರು.
ದ್ವಿತೀಯ- ಪಾರಿತೋಷ್ ಅಮೀನ್- ಎಸ್‌ಎಂವಿಐಟಿ, ಉಡುಪಿ.
ಸರ್ಕ್ಯೂಟ್ರಿಕ್ಸ್:
ಪ್ರಥಮ- ಅರ್ಷದ್ ಅಲಿ, ಮುಹಮ್ಮದ್ ಹನೀಫ್ ಮತ್ತು ಸಫ್ರೀನಾ, ಬಿಐಟಿ ಮಂಗಳೂರು.
ದ್ವಿತೀಯ: ಹೇಮರಾಜ್, ಸಹ್ಯಾದ್ರಿ ಕಾಲೇಜು, ಮಂಗಳೂರು.
ಪೇಪರ್ ಪ್ರಸ್ತುತಿ:
ಪ್ರಥಮ- ವಿನೀತಾ ಮತ್ತು ಪೂರ್ಣಿಮಾ ಭಟ್, ಶ್ರೀನಿವಾಸ ಸ್ಕೂಲ್ ಆಫ್ ಇಂಜಿನಿಯರಿಂಗ್, ಮುಕ್ಕ.
ದ್ವಿತೀಯ: ಶಿಲ್ಪಾ ಪ್ರಭು ಮತ್ತು ವೈಷ್ಣವಿ ಕೆ.ಭಟ್, ಕೆನರಾ ಇಂಜಿನಿಯರಿಂಗ್ ಕಾಲೇಜು, ಬಂಟ್ವಾಳ.
3.ಕಂಪ್ಯೂಟರ್ ಸೈಯನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗ.
ಪೇಪರ್ ಪ್ರಸ್ತುತಿ:
ಪ್ರಥಮ- ಪೂರ್ಣಿಮಾ ಭಟ್, ವಿನಿತಾ- ಶ್ರೀನಿವಾಸ ಸ್ಕೂಲ್ ಆಫ್ ಇಂಜಿನಿಯರಿಂಗ್ ಮುಕ್ಕ.
ದ್ವಿತೀಯ- ಮೇಘನಾ, ನೇಹಾ ಕಾಮತ್- ಕೆನರಾ ಕಾಲೇಜು ಬಂಟ್ವಾಳ.
ವೆಬ್ ಡಿಸೈನಿಂಗ್:
ಪ್ರಥಮ- ಶ್ರೀನಾಥ್ ಎಸ್.ನಾಯಕ್, ಕೆನರಾ ಇಂಜಿನಿಯರಿಂಗ್ ಕಾಲೇಜು, ಬಂಟ್ವಾಳ.
ದ್ವಿತೀಯ- ಸುಷಿನ್ ಪಿ, ಪಿ.ಎ.ಕಾಲೇಜ್ ಆಫ್ ಇಂಜಿನಿಯರಿಂಗ್, ಮಂಗಳೂರು.
ತಾಂತ್ರಿಕ ನಿಧಿ ಶೋಧ:
ಪ್ರಥಮ- ಮರಿಯಮ್ ಹಂಶೀದ ಮತ್ತು ಫಾತಿಮತ್ ಶಹನಾಝ್, ಬಿಐಟಿ ಮಂಗಳೂರು.
ದ್ವಿತೀಯ: ಕಾವ್ಯಾ ಶೆಟ್ಟಿ ಮತ್ತು ನಯನಾ- ಕೆನರಾ ಇಂಜಿನಿಯರಿಂಗ್ ಕಾಲೇಜ್ ಬಂಟ್ವಾಳ. 4.ಸಿವಿಲ್ ಇಂಜಿನಿಯರಿಂಗ್ ವಿಭಾಗ
ಸಿಎಡಿ ಮೇನಿಯಾ-
ಪ್ರಥಮ- ಫೈಝಲ್ ಮತ್ತು ಜುನೈದ್- ಪಿ.ಎ.ಕಾಲೇಜು, ಮಂಗಳೂರು.
ದ್ವಿತೀಯ: ಅನೀಶ್ ನಾರಾಯಣ ಮತ್ತು ಆವಿಲ್ ಸೆರಾವೊ- ವಿಸಿಇಟಿ ಪುತ್ತೂರು.
ಸರ್ವೆ ಹಂಟ್:
ಪ್ರಥಮ- ಶಿವಕುಮಾರ್, ಪಿ.ಎ.ಕಾಲೇಜು, ಮಂಗಳೂರು.
ದ್ವಿತೀಯ: ಮುಹಮ್ಮದ್ ಇಲ್ಯಾಸ್, ಬಿಐಟಿ ಮಂಗಳೂರು.
ಪೇಪರ್ ಪ್ರಸ್ತುತಿ:
ಪ್ರಥಮ- ಮುಹಮ್ಮದ್ ಸಾದಿಕ್, ಸಚಿನ್- ಎಂಐಟಿಇ ಮೂಡುಬಿದಿರೆ.
ದ್ವಿತೀಯ: ಸಫ್ದರ್ ಹಫೀಝ್, ಬಿಐಟಿ ಮಂಗಳೂರು.







