ಬಿ.ಜಿ.ಮೋಹನದಾಸರ ಕೃತಿ ಬಿಡುಗಡೆ
ಉಡುಪಿ, ಎ.10: ಸುಹಾಸಂ ವಿಂಶತಿ ಸರಣಿ ಕಾರ್ಯಕ್ರಮದ ಅಂಗವಾಗಿ ಗಲ್ಫ್ ಕನ್ನಡಿಗ ಬಿ.ಜಿ.ಮೋಹನದಾಸ್ ಅವರ ಕೃತಿ ಅನಾವರಣ ಹಾಗೂ ಅವರ ಅಭಿನಂದನಾ ಕಾರ್ಯಕ್ರಮ ಎ.15ರಂದು ಬೆಳಗ್ಗೆ 10:30ಕ್ಕೆ ಹೊಟೇಲ್ ಕಿದಿಯೂರಿನ ಮಹಾಜನ ಸಭಾಂಗಣದಲ್ಲಿ ನಡೆಯಲಿದೆ.
ಕಾಂತಾವರ ಕನ್ನಡ ಸಂಘದ ‘ನಾಡಿಗೆ ನಮಸ್ಕಾರ’ ಸರಣಿಯಲ್ಲಿ ಕನ್ನಡ ಭಾಷೆ ಹಾಗೂ ಕಲೆಗೆ ನೀಡಿದ ವ್ಯಕ್ತಿಗಳ ಕುರಿತ ಕೃತಿ ಮಾಲೆಯಲ್ಲಿ ಬಿ.ಜಿ.ಮೋಹನ್ ದಾಸ್‌ರ ಕುರಿತು ಸಾಹಿತಿ ಅಂಶುಮಾಲಿ ಕೃತಿ ರಚಿಸಿದ್ದಾರೆ.
ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಅವರು ಕೃತಿ ಅನಾವರಣಗೊಳಿಸಿ, ಬಿಜಿ ಅವರನ್ನು ಅಭಿನಂದಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ಹಾಗೂ ಸಾಹಿತಿ ಡಾ.ನಾ.ಮೊಗಸಾಲೆ, ಹಿರಿಯ ಪತ್ರಕರ್ತ ಎನ್.ಗುರುರಾಜ್, ಅಂಶುಮಾಲಿ, ಸುಹಾಸಂ ಅಧ್ಯಕ್ಷ ಎಚ್.ಶಾಂತರಾಜ್ ಐತಾಳ್, ಕು.ಗೋ. ಉಪಸ್ಥಿತರಿರುವರು ಎಂದು ಸುಹಾಸಂ ಪ್ರಕಟನೆ ತಿಳಿಸಿದೆ.
Next Story





