ರೈತನಿಂದ ಲಂಚ ಕೇಳಿದ ಆರೋಪ: ಗ್ರಾಮಲೆಕ್ಕಿಗ ಎಸಿಬಿ ಬಲೆಗೆ
ಬೆಂಗಳೂರು, ಎ.10: ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪದ ಮೇಲೆ ಗ್ರಾಮಲೆಕ್ಕಿಗನೊಬ್ಬರು ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಹಾಸನ ಜಿಲ್ಲೆಯ ಹಳೇಬೀಡು ಹೋಬಳಿಯ ಮಲ್ಲಿಕಾರ್ಜುನ ಎಸಿಬಿ ಬಲೆಗೆ ಸಿಕ್ಕಿರುವ ಗ್ರಾಮಲೆಕ್ಕಿಗ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಕರಣದ ವಿವರ: ಹಳೇಬಿಡು ಹೋಬಳಿಯ ಗಂಗೂರು ಗ್ರಾಮದ ರೈತರೊಬ್ಬರು ಬಗರ್ ಹುಕುಂ ಯೋಜನೆಯಡಿಯಲ್ಲಿ ಜಮೀನಿನ ಖಾತೆಗಾಗಿ ನಾಡ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಖಾತೆ ಮಾಡಿಕೊಡಲು 27 ಸಾವಿರ ರೂಪಾಯಿ ಲಂಚ ನೀಡುವಂತೆ ಗ್ರಾಮಲೆಕ್ಕಿಗ ಮಲ್ಲಿಕಾರ್ಜುನ ಬೇಡಿಕೆಯಿಟ್ಟಿದ್ದ ಆರೋಪದ ಮೇಲೆ ಎಸಿಬಿಗೆ ದೂರು ಸಲ್ಲಿಸಲಾಗಿತ್ತು.
ಸೋಮವಾರ ಬೆಳಗ್ಗೆ 11:30ರ ಸುಮಾರಿಗೆ ಕಚೇರಿ ಹೊರಭಾಗದಲ್ಲಿ ರೈತನಿಂದ ಗ್ರಾಮಲೆಕ್ಕಿಗ ಮಲ್ಲಿಕಾರ್ಜುನ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಭ್ರಷ್ಟಾಚಾರ ತಡೆ ಕಾಯ್ದೆ-1988ರ ಅಡಿ ಇಲ್ಲಿನ ಹಾಸನ ಜಿಲ್ಲಾ ಪೊಲೀಸ್ ಠಾಣೆ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.
Next Story





