ಮದ್ಯ ನಿಷೇಧದೆಡೆಗೆ ಮಧ್ಯಪ್ರದೇಶ
ಭೋಪಾಲ್, ಎ.10: ಸಂಪೂರ್ಣ ಮದ್ಯನಿಷೇಧ ಜಾರಿಗೊಳಿಸಲು ಮುಂದಡಿ ಯಿಟ್ಟಿರುವ ಮಧ್ಯಪ್ರದೇಶ ಸರಕಾರವು ರಾಜ್ಯಾದಾದ್ಯಂತ ಎಲ್ಲಾ ಮದ್ಯದಂಗಡಿಗಳನ್ನು ಹಂತಹಂತವಾಗಿ ಮುಚ್ಚಲಾಗುವುದೆಂದು ಸೋಮವಾರ ಘೋಷಿಸಿದೆ.
ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಅವರು ನರಸಿಂಗ್‌ಪುರ್ ಜಿಲ್ಲೆಯ ನೀಮ್‌ಖೇರಾ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡುತ್ತಾ, ‘‘ ಎಲ್ಲ ಮದ್ಯದಂಗಡಿಗಳನ್ನು ಹಂತಹಂತವಾಗಿ ಮುಚ್ಚುಗಡೆಗೊಳಿಸುವ ಮೂಲಕ ರಾಜ್ಯದಲ್ಲಿ ಸಂಪೂರ್ಣ ಮದ್ಯನಿಷೇಧವನು ಜಾರಿಗೆ ತರಲಾಗುವುದು’ ಎಂದರು.ನರ್ಮದಾ ನದಿ ಉಳಿಸಿ ಜನಜಾಗೃತಿ ಅಭಿಯಾನದ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗ್ತಿು.
‘‘ಮೊದಲ ಹಂತದಲ್ಲಿ ರಾಜ್ಯ ಸರಕಾರವು ನರ್ಮದಾ ನದಿಯ ದಂಡೆಗಳು ಹಾಗೂ ನದಿಯ ಇಕ್ಕೆಲಗಳ ಐದು ಕಿ.ಮೀ.ಗಳ ವ್ಯಾಪ್ತಿಯೊಳಗೆ ಎಲ್ಲಾ ಮದ್ಯಂದಗಡಿಗಳನ್ನು ರಾಜ್ಯ ಸರಕಾರವು ಮುಚ್ಚುಗಡೆಗೊಳಿಸಿದೆ. ಮುಂದಿನ ಹಂತದಲ್ಲಿ ಮದ್ಯದಂಗಡಿಗಳನ್ನು ವಸತಿ ಪ್ರದೇಶಗಳು, ಶಿಕ್ಷಣ ಸಂಸ್ಥೆಗಳು ಅಥವಾ ಧಾರ್ಮಿಕ ಸ್ಥಳಗಳ ಸಮೀಪ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗುವುದಿಲ್ಲ’’ ಎಂದವರು ತಿಳಿಸಿದರು. ಶೀಘ್ರದಲ್ಲೇ ಮಾದಕದ್ರವ್ಯ ಸೇವನೆಯ ವಿರುದ್ಧವೂ ಅಭಿಯಾವನ್ನು ಆರಂಭಿಸಲಾಗುವುದೆಂದು ಚೌಹಾಣ್ ಹೇಳಿದರು.





