ಡಿಜಿಟಲ್ ವ್ಯವಹಾರ ನಡೆಸಿದ ಯುವಕನಿಗೆ 1 ಕೋಟಿ ರೂ. ಬಹುಮಾನ
ಹೊಸದಿಲ್ಲಿ, ಎ.10: ಡಿಜಿಟಲ್ ಪಾವತಿ ಪ್ರಕ್ರಿಯೆಯನ್ನು ಜನಪ್ರಿಯಗೊಳಿಸುವ ಸರಕಾರದ ಕ್ರಮವಾಗಿ ಜಾರಿಗೆ ತರಲಾಗಿರುವ ‘ಡಿಜಿಟಲ್ ವ್ಯವಹಾರ ಪ್ರೋತ್ಸಾಹ ಯೋಜನೆ’ಯಲ್ಲಿ 1,590 ರೂ. ವ್ಯವಹಾರ ನಡೆಸಿದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರೋರ್ವರಿಗೆ 1 ಕೋಟಿ ರೂ. ಬಹುಮಾನ ದೊರೆತಿದೆ. ಹೊಸದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಯೋಜನೆಯ 100ನೇ ಡ್ರಾ ನಡೆಸಿ ಅದೃಷ್ಟಶಾಲಿ ವಿಜೇತರನ್ನು ಆಯ್ಕೆ ಮಾಡಿದರು. ಗ್ರಾಹಕರ ವಿಭಾಗದಲ್ಲಿ ಪ್ರಥಮ ಬಹುಮಾನ 1 ಕೋಟಿ ರೂ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಿಗೆ, ದ್ವಿತೀಯ ಬಹುಮಾನ 50 ಲಕ್ಷ ರೂ. ಬ್ಯಾಂಕ್ ಆಫ್ ಬರೋಡಾದ ಗ್ರಾಹಕರಿಗೆ ಮತ್ತು ತೃತೀಯ ಬಹುಮಾನ 25 ಲಕ್ಷ ರೂ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಿಗೆ ಲಭಿಸಿತು.
Next Story





