ಪಂಜಾಬ್‌ಗೆ ಸುಲಭದ ಜಯ

ಇಂದೋರ್, ಎ.10: ಐಪಿಎಲ್ ಟ್ವೆಂಟಿ-20 ಟೂರ್ನಿಯ 8ನೆ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 8 ವಿಕೆಟ್‌ಗಳ ಜಯ ಗಳಿಸಿದೆ.
ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 149 ರನ್‌ಗಳ ಸವಾಲನ್ನು ಪಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇನ್ನೂ 33 ಎಸೆತಗಳು ಬಾಕಿ ಇರುವಾಗಲೇ 2 ವಿಕೆಟ್ ನಷ್ಟದಲ್ಲಿ 150 ರನ್ ಗಳಿಸಿ, ಸತತ ಎರಡನೆ ಗೆಲುವು ದಾಖಲಿಸಿತು.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆರಂಭಿಕ ದಾಂಡಿಗ ಮನನ್ ವೋರಾ 34 ರನ್, ಹಾಶಿಂ ಅಮ್ಲ ಔಟಾಗದೆ 58ರನ್,ಅಕ್ಷರ್ ಪಟೇಲ್ 9ರನ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಔಟಾಗದೆ 43 ರನ್ ಗಳಿಸಿದರು. ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಆರ್‌ಸಿಬಿ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 148 ರನ್ ಗಳಿಸಿತ್ತು.
ಎಬಿಡಿ ವಿಲಿಯರ್ಸ್ ಔಟಾಗದೆ 89 ರನ್(46ಎ, 3ಬೌ,9ಸಿ) ,
ಮನ್‌ದೀಪ್ ಸಿಂಗ್ 28ರನ್ ಮತ್ತು ಸ್ಟುವರ್ಟ್ ಬಿನ್ನಿ ಔಟಾಗದೆ 18 ರನ್ ಗಳಿಸಿದರು.
ಶೇನ್ ವ್ಯಾಟ್ಸನ್ 1ರನ್, ವಿಷ್ಣು ವಿನೋದ್ 7ರನ್, ಕೇದಾರ್ ಜಾಧವ್ 1ರನ್ ಸೇರಿಸಿದರು.





