Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನಾಸ್ಟ್ರಡಾಮಸ್‌ನ ಭವಿಷ್ಯವಾಣಿ ಮತ್ತು...

ನಾಸ್ಟ್ರಡಾಮಸ್‌ನ ಭವಿಷ್ಯವಾಣಿ ಮತ್ತು ಗೋತಿಯೆನ ಕೇಸರಿ ಪ್ರೇಮ!

ಸುರೇಶ್ ಭಟ್, ಬಾಕ್ರಬೈಲ್ಸುರೇಶ್ ಭಟ್, ಬಾಕ್ರಬೈಲ್11 April 2017 12:21 AM IST
share
ನಾಸ್ಟ್ರಡಾಮಸ್‌ನ ಭವಿಷ್ಯವಾಣಿ ಮತ್ತು ಗೋತಿಯೆನ ಕೇಸರಿ ಪ್ರೇಮ!

ನಿಜ ಹೇಳಬೇಕೆಂದರೆ ಗೋತಿಯೆ ಮಹಾಶಯನ ಈ ಹಳೆ ಟ್ರಂಕ್ ಎಷ್ಟೊಂದು ಸಲ ಪತ್ತೆಯಾಗಿದೆ ಎಂದರೆ ಅದರ ಲೆಕ್ಕ ಇಡುವುದೇ ಕಷ್ಟಕರವಾಗಿಬಿಟ್ಟಿದೆ! ಈತ ಕಳೆದ 18 ವರ್ಷಗಳ ಸುದೀರ್ಘ ಅವಧಿಯಲ್ಲಿ ಅದೇ ಹಳೆಯ ಟ್ರಂಕ್ ಒಳಗಿಂದ ಕೆಲವಾರು ನಾಸ್ಟ್ರಡಾಮಸ್ ಶ್ಲೋಕಗಳನ್ನು ಹೊರತೆಗೆದು ತನಗೆ ಬೇಕಾದ ಮಾರ್ಪಾಟುಗಳನ್ನು ಮಾಡಿ ಹಿಂದೂತ್ವವಾದಿಗಳಿಗೆ ಅನುಕೂಲಕರವಾದ ಅನೇಕ ಸ್ತೋತ್ರಗೀತೆಗಳನ್ನು ಹೆಣೆದಿದ್ದಾನೆ. 


ಇದೇ ಮಾರ್ಚ್ 28ರಂದು ‘ಟೈಮ್ಸ್ ಆಫ್ ಇಂಡಿಯ’ ಪತ್ರಿಕೆಯ ಜಾಲತಾಣದಲ್ಲಿ ‘ನಾಸ್ಟ್ರಡಾಮಸ್ ಮತ್ತು ಭಾರತ’ ಎಂಬ ತಲೆಬರಹದ ಒಂದು ಲೇಖನ ಪ್ರಕಟವಾಗಿದೆ. ಅದನ್ನು ಬರೆದ ಫ್ರಾಂಸ್ವಾ ಗೋತಿಯೆ ಎಂಬಾತ ಫ್ರಾನ್ಸ್ ದೇಶದ ಒಬ್ಬ ಪ್ರಜೆ. ‘‘2012ರಲ್ಲಿ ತನಗೆ ನಾಸ್ಟ್ರಡಾಮಸ್‌ನ ಕೆಲವು ಬಚ್ಚಿಟ್ಟ ಪುರಾತನ ಹಸ್ತಪ್ರತಿಗಳು ಲಭ್ಯವಾಗಿದ್ದು ಅದರಲ್ಲಿ ಭಾರತದಲ್ಲಿ ಮುಂದೆ ಸಂಭವಿಸಲಿರುವ ಘಟನೆಗಳ ಬಗ್ಗೆ ಭವಿಷ್ಯವಾಣಿ ನುಡಿಯಲಾಗಿದೆ’’ ಎಂದು ಗೋತಿಯೆ ತನ್ನ ಈ ಲೇಖನದಲ್ಲಿ ಹೇಳಿಕೊಳ್ಳುತ್ತಾನೆ. ಈತ ಹೇಳುವಂತೆ 2012ರಲ್ಲಿ ಪುರಾತನ ಸಾಮಗ್ರಿಗಳ ಅಂಗಡಿಯೊಂದಕ್ಕೆ ಭೇಟಿಯಿತ್ತ ಬಂಪ್ರೆಲ್ ದ ಲಾ ರೋಷ್‌ಫುಕೊ ಎಂಬಾತ 200 ಯೂರೊ ತೆತ್ತು ಅಲ್ಲಿಂದ ಹಳೆಯ ಟ್ರಂಕ್ ಒಂದನ್ನು ಖರೀದಿಸಿದ್ದ. ಫ್ರಾನ್ಸ್‌ನ ಓರ್ವ ವಿದ್ವಾಂಸನಾದ ಈ ಬಂಪ್ರೆಲ್, ನಾಸ್ಟ್ರಡಾಮಸ್ ವಿಷಯತಜ್ಞನೂ ಆಗಿದ್ದಾನೆ.

ಆ ಟ್ರಂಕ್‌ನೊಳಗೆ ಸಿಕ್ಕಂತಹ ಪ್ರಾಚೀನ ಹಸ್ತಪ್ರತಿಗಳನ್ನು ವಿಶ್ಲೇಷಣೆಗೊಳಪಡಿಸಿದಾಗ ಅವು 15ನೆ ಶತಮಾನಕ್ಕೆ ಸೇರಿರುವುದಾಗಿ ತಿಳಿದುಬಂದಿದೆ. ಅದರಲ್ಲಿ ಭಾರತದ ಕುರಿತು ಹಲವಾರು ಶ್ಲೋಕಗಳಿವೆ. ಅವುಗಳಲ್ಲಿ ಭಾರತವನ್ನು ಕೆಲವು ಕಡೆ ‘ಇಂಡೆಸ್’ ಎಂದು ಫ್ರೆಂಚ್ ಭಾಷೆಯಲ್ಲಿಯೂ ಹಲವು ಕಡೆ ‘ಇಂಡಿಕಸ್’ ಎಂದು ಲ್ಯಾಟಿನ್‌ನಲ್ಲಿಯೂ ಕರೆಯಲಾಗಿದೆ. ಇವುಗಳಲ್ಲೊಂದು ಶ್ಲೋಕ ಭಾರತ, ಪಾಕಿಸ್ತಾನಗಳ ಮಧ್ಯೆ ಪರಮಾಣು ಯುದ್ಧ ನಡೆಯುವ ಸಾಧ್ಯತೆಗಳ ಕುರಿತು ತಿಳಿಸುತ್ತದೆ ಎನ್ನುವ ಗೋತಿಯೆ ನಾಸ್ಟ್ರಡಾಮಸ್‌ನ ಆ ಶ್ಲೋಕವನ್ನು ಉಲ್ಲೇಖಿಸುತ್ತಾನೆ: ‘‘ಇಂಡಿಯ ಎಂಬ ಗರುಡ ಸಜ್ಜುಗೊಳ್ಳಬೇಕು, ತನ್ನ ಸೇನೆಯನ್ನು ಬಲಪಡಿಸಬೇಕು. ಇಲ್ಲವಾದರೆ ಪಾಕಿಸ್ತಾನ ಎಂಬ ಆನೆ ಹಠಾತ್ತನೆ ಇಂಡಿಯದ ಮೇಲೆ ಆಕ್ರಮಣ ಮಾಡಿ ಜನರನ್ನು ಮತ್ತು ಸಾಗರವನ್ನು ದಹಿಸಲಿದೆ.’’

ಆದರೆ ನಾಸ್ಟ್ರಡಾಮಸ್‌ನ ಮೂಲಪ್ರತಿಯಲ್ಲಿ ಇಂಡೆಸ್ (ಇಂಡಿಯ) ಎಂಬ ಪದವೇ ಇಲ್ಲ! ಗೋತಿಯೆ ಮಹಾಶಯನ ಲೇಖನದಲ್ಲಿ ಮೂಲಪ್ರತಿ ಯನ್ನು ತಿರುಚಲಾಗಿರುವುದು ಸ್ಪಷ್ಟವಿದೆ. ಇದೇ ಲೇಖನದ ಬೇರೊಂದು ಕಡೆ ಉಲ್ಲೇಖಿಸಲಾದ ಇನ್ನೊಂದು ನಾಸ್ಟ್ರಡಾಮಸ್ ಶ್ಲೋಕ ಹೀಗಿದೆ: ‘‘2014ರಿಂದ ಹಿಂದೂಗಳ ಆಳ್ವಿಕೆ ಪ್ರಾರಂಭವಾಗಲಿದೆ. ಅವರು ಸ್ವರ್ಗ, ಮರ್ತ್ಯ ಲೋಕಗಳೆರಡನ್ನೂ ಆಳಲಿರುವರು. ಏಶ್ಯಾ ಖಂಡದಲ್ಲಿ ಅವರನ್ನು ವಿರೋಧಿಸುವವರು ಯಾರೂ ಇರುವುದಿಲ್ಲ.’’

 ಇಲ್ಲಿಯೂ ಮೂಲಪ್ರತಿಯಲ್ಲಿ Hindoos ಎಂಬ ಶಬ್ದ ಇಲ್ಲ. ಮೂಲಪ್ರತಿಯಲ್ಲಿ ಇರುವ Hesperies (ಹೆಸ್‌ಪೆರಿ) ಎಂಬ ಶಬ್ದವನ್ನು ಅಳಿಸಿ ಅದರ ಜಾಗದಲ್ಲಿ Hindoos ಶಬ್ದವನ್ನು ಸೇರಿಸಲಾಗಿದೆ!

ಗೋತಿಯೆ ಮಹಾಶಯ ತನ್ನ ಲೇಖನದಲ್ಲಿ ಉಲ್ಲೇಖಿಸುವ ಮಗದೊಂದು ನಾಸ್ಟ್ರಡಾಮಸ್ ಶ್ಲೋಕ ಮೂಲಪ್ರತಿಯಲ್ಲಿ ಎಲ್ಲೂ ಇಲ್ಲ: ‘‘ಭಾರತದ ಸರ್ವೋಚ್ಚ ನಾಯಕ ಗುಜರಾತ್ ರಾಜ್ಯದಲ್ಲಿ ಜನಿಸಲಿದ್ದಾನೆ. ಅವನ ಅಪ್ಪ ಅಂಗಡಿಯೊಂದರಲ್ಲಿ ಚಹಾ ಮಾರಲಿದ್ದಾನೆ. ಅವನ ಹೆಸರಿನ ಪ್ರಥಮ ಭಾಗ ನರೇಂದಸ್ ಎಂದಿರುತ್ತದೆ.’’

ಆರೆಸ್ಸೆಸ್‌ನ ‘ಆರ್ಗನೈಸರ್’ ವಾರಪತ್ರಿಕೆ ಕೈಲಿ ಅಸಾಧ್ಯ ಭಾರತಪ್ರೇಮಿ ಎಂದು ಬಣ್ಣಿಸಲ್ಪಟ್ಟಿರುವ ಈ ಗೋತಿಯೆ ಮಹಾಶಯ ತನ್ನ ಈ ಹಳೆಯ ಟ್ರಂಕ್‌ಅನ್ನು ಒಂದಲ್ಲ, ಹಲವು ಬಾರಿ ಕಂಡುಹುಡುಕಿದ್ದಾನೆ! ಈತ 2014ರಲ್ಲಿ ತನ್ನ ಸ್ವಂತ ಜಾಲತಾಣದಲ್ಲಿ ಬರೆದ “Nostradamus and 2014 elections” ಎಂಬ ಬ್ಲಾಗ್‌ನಲ್ಲಿಯೂ 2009ರ  “Nostradamus and Saffron” ಎಂಬ ಬ್ಲಾಗ್‌ನಲ್ಲಿಯೂ ಹಳೆಯ ಟ್ರಂಕ್ ಪತ್ತೆಯಾದ ಕಥನಗಳನ್ನು ಕಾಣಬಹುದು! 2017ರ ಟೈಮ್ಸ್ ಆಫ್ ಇಂಡಿಯ ಲೇಖನ ಇದೇ ಸರಣಿಯಲ್ಲಿ ಇತ್ತೀಚಿನದು. 2014ರಲ್ಲಿ ಗೋತಿಯೆ ಹೀಗೆ ಬರೆದಿದ್ದ: ಆಮೇಲೆ ನಾಸ್ಟ್ರಡಾಮಸ್‌ನ ಇನ್ನೊಂದು ಭವಿಷ್ಯವಾಣಿ

‘‘ಬಿಜೆಪಿಯು ವಾಜಪೇಯಿ, ಅಡ್ವಾಣಿ ಮತ್ತು ನರೇಂದ್ರ ಮೋದಿ ಎಂಬ ಮೂರು ಆಧಾರಸ್ತಂಭಗಳನ್ನು ಹೊಂದಲಿದೆ. ಅಂತಿಮವಾಗಿ ವಾಜಪೇಯಿ ಸಕ್ರಿಯರಾಗಿ ಉಳಿಯುವುದಿಲ್ಲ, ಅಡ್ವಾಣಿ ಪಟ್ಟುಬಿಡದೆ ಮುಂದುವರಿಯಲಿರುವರು, ನರೇಂದ್ರ ಮೋದಿ ಹೊರಹೊಮ್ಮಲಿರುವರು.’’

ಅಂದ ಹಾಗೆ 2014ರಲ್ಲಿ ನರೇಂದ್ರ ಮೋದಿಯನ್ನು ನರೇಂದ್ರಂ ಮೋದಂ ಎಂದು ಸಂಬೋಧಿಸುವ ತಥಾಕಥಿತ ನಾಸ್ಟ್ರಡಾಮಸ್ 2017ರಲ್ಲಿ ಅದನ್ನು ನರೇಂದ್ರಸ್ ಎಂದು ಬದಲಾಯಿಸಿರುವುದು ತಮಾಷೆಯಾಗಿಲ್ಲವೆ! ಇರಲಿ. ಈಗ 2009ರ ಬ್ಲಾಗಿನಲ್ಲಿ ಏನು ಹೇಳಲಾಗಿದೆ ನೋಡೋಣ. 2009ರಲ್ಲಿಯೂ ಆತ ಮೂರು ಸ್ತಂಭಗಳ ಬಗ್ಗೆ ಬರೆಯುತ್ತಾನೆ. ಆದರೆ ಅಂದು ಮೂರು ಸ್ತಂಭಗಳಾಗಿದ್ದವರು ವಾಜಪೇಯಿ, ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ! 2009ರ ಲೇಖನದಲ್ಲಿ ಉದ್ಧರಿಸಲಾದ ತಥಾಕಥಿತ ನಾಸ್ಟ್ರಡಾಮಸ್‌ನ ಶ್ಲೋಕ ಹೀಗಿದೆ:

ತರುವಾಯ ಇನ್ನೊಂದು ಭವಿಷ್ಯವಾಣಿ:
‘‘ಬಿಜೆಪಿಯು ವಾಜಪೇಯಿ, ಅಡ್ವಾಣಿ ಮತ್ತು ಮುರಳಿ ಜೋಶಿ ಎಂಬ ಮೂರು ಆಧಾರಸ್ತಂಭಗಳನ್ನು ಹೊಂದಲಿದೆ. ಅಂತಿಮವಾಗಿ ವಾಜಪೇಯಿ ಸಕ್ರಿಯರಾಗಿ ಉಳಿಯುವುದಿಲ್ಲ, ಅಡ್ವಾಣಿ ನಾಯಕ ಆಗಲಿರುವರು, ಕಾಶ್ಮೀರದಲ್ಲಿ ಭಾರತದ ಧ್ವಜವನ್ನು ಹಾರಿಸುವ ಮುರಳಿ ಜೋಶಿ ದ್ವಿತೀಯ ಸ್ಥಾನ ಹೊಂದಲಿರುವರು.’’

2009 ಮತ್ತು 2014ರ ಬ್ಲಾಗ್‌ಗಳಲ್ಲದೆ ಫ್ರಾಂಸ್ವಾ ಗೋತಿಯೆ ಬರೆದಿರುವ ಪುಸ್ತಕಗಳಲ್ಲಿಯೂ ಹಳೆಯ ಟ್ರಂಕ್ ದೊರೆತಿರುವ ಕುರಿತು ಪ್ರಸ್ತಾಪಿಸಲಾಗಿದೆ. 2001ರ “A Western Journalist on India” ಮತ್ತು 2003ರ “Rewriting Indian history” ಎಂಬ ಪುಸ್ತಕಗಳಲ್ಲಿ ಒಂದು ತಿಂಗಳ ಹಿಂದೆ ಒಂದು ಹಳೆಯ ಟ್ರಂಕ್ ದೊರೆತ ಪ್ರಸ್ತಾಪವನ್ನು ಕಾಣಬಹುದು. ಇದಕ್ಕೂ ಹಿಂದೆ ಹೋದರೆ 1999ನೆ ಇಸವಿಯಲ್ಲಿ ಪ್ರಕಟವಾದ ಆರೆಸ್ಸೆಸ್‌ನ ವಾರಪತ್ರಿಕೆ ಆರ್ಗನೈಸರ್‌ನ 51ನೆ ಸಂಪುಟದಲ್ಲಿ ಕೂಡಾ ಫ್ರಾಂಸ್ವಾ ಗೋತಿಯೆಗೆ ಒಂದು ತಿಂಗಳ ಹಿಂದೆ ಒಂದು ಹಳೆಯ ಟ್ರಂಕ್ ದೊರೆತಿರುವ ಬಗ್ಗೆ ಬರೆಯಲಾಗಿದೆ!

ಆ ಹಳೆಯ ಟ್ರಂಕ್‌ನಲ್ಲಿ ಸಿಕ್ಕಿದ ಕೆಲವು ಪ್ರಾಚೀನ ಹಸ್ತಪ್ರತಿಗಳ ಪ್ರಕಾರ ಆರೆಸ್ಸೆಸ್‌ನ್ನು ಸ್ಥಾಪಿಸಿದವನು ನಾಸ್ಟ್ರಡಾಮಸ್ ಮತ್ತು ಅದು ಸ್ಥಾಪನೆಯಾಗಿರುವುದು 400 ವರ್ಷಗಳ ಹಿಂದೆ! ನಿಜ ಹೇಳಬೇಕೆಂದರೆ ಗೋತಿಯೆ ಮಹಾಶಯನ ಈ ಹಳೆ ಟ್ರಂಕ್ ಎಷ್ಟೊಂದು ಸಲ ಪತ್ತೆಯಾಗಿದೆ ಎಂದರೆ ಅದರ ಲೆಕ್ಕ ಇಡುವುದೇ ಕಷ್ಟಕರವಾಗಿಬಿಟ್ಟಿದೆ! ಈತ ಕಳೆದ 18 ವರ್ಷಗಳ ಸುದೀರ್ಘ ಅವಧಿಯಲ್ಲಿ ಅದೇ ಹಳೆಯ ಟ್ರಂಕ್ ಒಳಗಿಂದ ಕೆಲವಾರು ಶ್ಲೋಕಗಳನ್ನು ಹೊರತೆಗೆದು ತನಗೆ ಬೇಕಾದ ಮಾರ್ಪಾಟುಗಳನ್ನು ಮಾಡಿ ಹಿಂದೂತ್ವವಾದಿಗಳಿಗೆ ಅನುಕೂಲಕರವಾದ ಅನೇಕ ಸ್ತೋತ್ರಗೀತೆಗಳನ್ನು ಹೆಣೆದಿದ್ದಾನೆ.

ವಿಶೇಷವೆಂದರೆ ಆತನ ಈ ಹಳೆಯ ಟ್ರಂಕ್ ಒಳಗಿಂದ ಹೊರಬೀಳುವ ಭವಿಷ್ಯವಾಣಿಗಳು ಪ್ರಸಕ್ತ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುತ್ತಿರುತ್ತವೆ! ಸತ್ಯಾಂಶ ತಿಳಿದ ಬಳಿಕ ಟೈಮ್ಸ್ ಆಫ್ ಇಂಡಿಯ ಈ ಬ್ಲಾಗ್‌ಅನ್ನು ತನ್ನ ಜಾಲತಾಣದಿಂದ ಅಳಿಸಿಹಾಕಿದೆ. ಆದರೆ ಅದಾಗಲೇ ಇದು ಜೀ ನ್ಯೂಸ್ ವಾಹಿನಿಯಲ್ಲಿ ಪ್ರಸಾರಗೊಂಡಿದೆ. ಮಾತ್ರವಲ್ಲ, ಇಂದಿನ ಶರವೇಗದ ಸಂವಹನ ಯುಗದಲ್ಲಿ ಫೇಸ್‌ಬುಕ್, ವಾಟ್ಸ್‌ಆ್ಯಪ್ ಮುಂತಾದ ವೇದಿಕೆಗಳ ಮೂಲಕವೂ ಸಾಕಷ್ಟು ವ್ಯಾಪಕ ಪ್ರಚಾರ ಪಡೆದಿರಲೇಬೇಕು ಮತ್ತು ಈಗಾಗಲೇ ಬಹಳಷ್ಟು ಮುಗ್ಧ ಜನ ಇದನ್ನು ನಿಜವೆಂದು ನಂಬಿಯೂ ಆಗಿರಬೇಕು.

(ಆಧಾರ:  Alt Newsನಲ್ಲಿ ಪ್ರತೀಕ್ ಸಿನ್ಹಾ ಲೇಖನ)

share
ಸುರೇಶ್ ಭಟ್, ಬಾಕ್ರಬೈಲ್
ಸುರೇಶ್ ಭಟ್, ಬಾಕ್ರಬೈಲ್
Next Story
X