ಪೂಜಾರಿಯಿಂದ ಗೃಹಣಿ ಮೇಲೆ ಅತ್ಯಾಚಾರ ಯತ್ನ

ತುಮಕೂರು, ಎ.11: ಸ್ವಯಂ ಘೋಷಿತ ಪೂಜಾರಿಯೊಬ್ಬ ವಿಶೇಷ ಪೂಜೆಯ ನೆಪದಲ್ಲಿ ಗೃಹಣಿಯನ್ನು ಬಾತ್‌ರೂಮ್‌ಗೆ ಕರೆದೊಯ್ದು ಅತ್ಯಾಚಾರ ನಡೆಸಲು ಯತ್ನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತುರುವೇಕೆರೆ ತಾಲೂಕಿನ ಅಕ್ಕಳಸಂದ್ರ ಗ್ರಾಮದಲ್ಲಿ ಕಳೆದ ಶುಕ್ರವಾರ ಈ ಘಟನೆ ನಡೆದಿದ್ದು, ನಾಗಮಂಗಲದ ಮಹೇಶ್ ಪೂಜಾರ್ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ಎಂದು ಗುರುತಿಸಲಾಗಿದೆ.
ತಾಲೂಕಿನ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





