ಇಸ್ಲಾಮಿಕ್ ಬೇಸಿಗೆ ಶಿಬಿರಕ್ಕೆ ಚಾಲನೆ

ಮಂಗಳೂರು, ಎ. 11: ಸಲಫಿ ಎಜುಕೇಶನ್ ಬೋರ್ಡ್ ಮತ್ತು ಸಲಫಿ ಗರ್ಲ್ಸ್ ಮೂವ್ ಮೆಂಟ್ ಇದರ ಜಂಟಿ ಆಶ್ರಯದಲ್ಲಿ ಇಸ್ಲಾಮಿಕ್ ಬೇಸಿಗೆ ಶಿಬಿರವು ಆರಂಭವಾಯಿತು . ಸಲಫಿ ಎಜುಕೇಶನ್ ಬೋರ್ಡ್ ಅಧ್ಯಕ್ಷ ಮುಸ್ತಾಫಾ ಧಾರಿಮಿಯವರು ಇಸ್ಲಾಹೀ ಇಂಗ್ಲಿಷ್ ಮಧ್ಯಮ ಶಾಲೆಯಲ್ಲಿ ಶಿಬಿರವನ್ನು ಉದ್ಘಾಟಿಸಿದರು
ಏಪ್ರಿಲ್ 11 ರಿಂದ 23 ರ ವರೆಗೆ ನಡೆಯುವ ಈ ಶಿಬಿರದಲ್ಲಿ ಅಕೀದ, ವಿಶ್ವಾಸ ಪಾಠಗಳು , ಪ್ರವಾದಿಗಳ ಮತ್ತು ಸಹಾಬಿಗಳ ಚರಿತ್ರೆ , ಆಯ್ದ ಕುರ್ ಆನ್ ಸೂರಗಳ ಅರ್ಥ ವ್ಯಾಖಾನ, ಜನಾಝ ಸಂಸ್ಕರಣೆಯ ಪ್ರಾಯೋಗಿಕ ರೂಪ ಮತ್ತು ವಿವರಣೆ ಹಾಗೂ ಇನ್ನಿತರ ವಿಷಯಗಳನ್ನು ಶಿಬಿರಗಳಲ್ಲಿ ಕಲಿಸಲಾಗುವುದು ಶಿಬಿರದ ಕೊನೆಯ ದಿನ ದಂಡು ವಿದ್ಯಾರ್ಥಿಗಳಿಂದ ಇಸ್ಲಾಮಿ ಸಾಂಸ್ಕ್ರತಿಕ ಕಾರ್ಯಕ್ರಮ ಹೆಗ್ಗೂ ಕಿರು ಪ್ರವಾಸ ಇದೆಯೆಂದು ದಾರಿಮಿಯವರು ಪ್ರಕಟಣೆಯಲ್ಲಿ ತಿಳಿಸಿದರು
ಉದ್ಘಾಟನಾ ಕಾರ್ಯಕ್ರಮದಲ್ಲಿ ಇಸ್ಲಾಹಿ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಜಿ. ಎ. ರಾಝಕ್, ಕಾರ್ಯದರ್ಶಿ ಯು. ಎ . ಖಾಸಿಂ, ಉದ್ಯಮಿ ಸಲೀಂ ಬರಕಾ. ಎಜುಕೇಶನ್ ಬೋರ್ಡ್ ನ ಪ್ರಧಾನ ಕಾರ್ಯದರ್ಶಿ ಬಶೀರ್ ಶಾಲಿಮಾರ್ ಸಲಫಿ ಗರ್ಲ್ಸ್ ಮೂವ್ ಮೆಂಟ್ ನ ಅಧ್ಯಕ್ಷೆ ಬಸೀರಾ ಮುಂತಾದವರು ಉಪಸ್ಥಿತರಿದ್ದರು ಎಸ್ . ಇ. ಬಿ. ನ ಜತೆ ಕಾರ್ಯದರ್ಶಿ ಅಹ್ಮದ್ ಮಾಸ್ಟರ್ ರವರು ಆರಂಭದಲ್ಲಿ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದ ಅರ್ಪಿಸಿದರು.







