ಹೊಟೇಲು ಅಡುಗೆ ಕೋಣೆಯಲ್ಲಿ ಸಿಸಿಟಿವಿ ಕ್ಯಾಮರಾ ಇರಿಸಬೇಕು: ಮಾನವಹಕ್ಕು ಆಯೋಗ

ಸಾಂಧರ್ಬಿಕ ಚಿತ್ರ
ಕೊಚ್ಚಿ, ಎ. 11: ಇನ್ನು ಅಡುಗೆ ಮಾಡುವುದನ್ನು ನೋಡಿ ಆಹಾರ ಸೇವಿಸಬಹುದು. ಹೊಟೇಲುಗಳ ಅಡುಗೆ ಕೋಣೆಯಲ್ಲಿ ಸಿಸಿಟಿವಿಕ್ಯಾಮರಾ ಇರಿಸಿ ಆಹಾರವನ್ನು ಹೇಗೆ ತಯಾರಿಸಲಾಗುತ್ತಿದೆ ಎಂದು ಹೊಟೇಲ್ಗೆ ಬರುವ ಗಿರಾಕಿಗಳಿಗೆ ತೋರಿಸಬೇಕೆಂದು ಕೇರಳ ರಾಜ್ಯ ಮಾನವಹಕ್ಕು ಆಯೋಗ ಆದೇಶಹೊರಡಿಸಿದೆ.
ಆರೋಗ್ಯ ಇಲಾಖೆ ಕಾರ್ಯದರ್ಶಿಮತ್ತು ಆಹಾರ ಭದ್ರತಾ ಕಮಿಶನರ್ ಇದಕ್ಕೆ ಆವಶ್ಯಕ ಕ್ರಮತೆಗೆದುಕೊಳ್ಳಬೇಕೆಂದು ಮಾನವಹಕ್ಕು ಕಾರ್ಯಕಾರಿ ಅಧ್ಯಕ್ಷ ಪಿ. ಮೋಹನ್ದಾಸ್ರು ಅದೇಶದಲ್ಲಿ ಸೂಚಿಸಿದ್ದಾರೆ.
ಹೊಟೇಲುಗಳಲ್ಲಿ ವಿತರಿಸುವ ಆಹಾರದ ಗುಣಮಟ್ಟ ದೃಢಪಡಿಸುವ ಜವಾಬ್ದಾರಿಯನ್ನು ಸರಕಾರ ಹೊಂದಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ. ಅಬಕಾರಿ, ಆರೋಗ್ಯ, ಸ್ಥಳೀಯಾಡಳಿತ ಕಾರ್ಯದರ್ಶಿಗಳು ಎರಡು ತಿಂಗಳೊಳಗೆ ಕ್ರಮ ಕೈಗೊಳ್ಳಬೇಕು. ಆಹಾರ ಭದ್ರತಾ ಕಮಿಶನರ್ ಕೈಗೊಂಡ ಕ್ರಮಗಳನ್ನು ಮಾನವಹಕ್ಕು ಅಯೋಗಕ್ಕೆ ತಿಳಿಸಬೇಕು.
ಡಾ. ಸಜೀವ್ ಭಾಸ್ಕರ್ ಮಾನವಹಕ್ಕು ಆಯೋಗಕ್ಕೆ ದೂರು ನೀಡಿದ್ದರು. ಈ ದೂರಿನಡಿಯಲ್ಲಿ ಈಗ ಅದು ಹೊಟೇಲುಗಳಲ್ಲಿ ಸಿಸಿಟಿವಿ ಸ್ಥಾಪಿಸುವಂತೆ ಆದೇಶ ಹೊರಡಿಸಿದೆ. ಗುಣಮಟ್ಟದ ಆಹಾರ ಸೇವಿಸುವುದು ಪ್ರಜೆಗಳ ಸಂವಿಧಾನಾತ್ಮಕ ಹಕ್ಕು ಎಂದು ಮಾನವಹಕ್ಕು ಆಯೋಗ ತನ್ನ ಆದೇಶದಲ್ಲಿ ಸೂಚಿಸಿದೆ.