ಬಾಲಕಿಯ ಅಪಹರಿಸಿ ಅತ್ಯಾಚಾರ

ಬಾಗೇಪಲ್ಲಿ, ಎ.11: ಬಾಲಕಿಯೋರ್ವಳನ್ನುಅಪಹರಿಸಿದ ದುಷ್ಕರ್ಮಿಯೋರ್ವ ಆಕೆಯನ್ನು ಅತ್ಯಾಚಾರಗೈದ ಘಟನೆ ಚೇಳೂರು ಪೋಲಿಸ್ ಠಾಣೆ ವ್ಯಾಪ್ತಿಯ ರಾಮೋಜಿಪಲ್ಲಿ ಗ್ರಾಮದಲ್ಲಿ ನಡೆದಿದೆ.
ಬಾಲಕಿ ಊರಿನ ಹೊರವಲಯಕ್ಕೆ ಬಹಿರ್ದೆಸೆಗೆಂದು ಹೋಗುತ್ತಿರುವ ಸಮಯದಲ್ಲಿ ಅದೇ ಗ್ರಾಮದ ನವೀನ್ ಎಂಬಾತ ಆಕೆಯನ್ನು ಅಪಹರಿಸಿ, ಅತ್ಯಾಚಾರಗೈದಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಬಾಲಕಿಯ ತಂದೆ ಚೇಳೂರು ಪೋಲಿಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story





