ಈಗ 309 ರೂ.ಗೆ ಜಿಯೋದಿಂದ ‘ಧನ್ ಧನಾ ಧನ್’ ಕೊಡುಗೆ
.svg_.png)
ಹೊಸದಿಲ್ಲಿ,ಎ.11: ರಿಲಯನ್ಸ್ ಜಿಯೊ ‘ಧನ್ ಧನಾ ಧನ್ ’ ಹೆಸರಿನಲ್ಲಿ ಹೊಸ ಟ್ಯಾರಿಫ್ ಪ್ಲಾನ್‌ನ್ನು ಮಂಗಳವಾರ ಘೋಷಿಸಿದ್ದು, ಇದರೊಂದಿಗೆ ತನ್ನ ‘ಸಮ್ಮರ್ ಸರ್ಪ್ರೈಸ್ ’ಕೊಡುಗೆಗೆ ಅಂತ್ಯ ಹಾಡಿದೆ. 309 ರೂ.ಗಳ ಶುಲ್ಕದಿಂದ ಆರಂಭಗೊಳ್ಳುವ ‘ಧನ್ ಧನಾ ಧನ್ ’ನಡಿ ಚಂದಾದಾರರು 84 ದಿನಗಳ ಅವಧಿಗೆ ಪ್ರತಿದಿನ ಒಂದು ಜಿಬಿ ಡಾಟಾ ಮತ್ತು 509 ರೂ.ಗೆ ಇದೇ ಅವಧಿಗೆ ಪ್ರತಿದಿನ ಎರಡು ಜಿಬಿ ಡಾಟಾ ಪಡೆಯಬಹುದಾಗಿದೆ. ಜೊತೆಗೆ ಎಲ್ಲ ಧ್ವನಿಕರೆಗಳು ಉಚಿತವಾಗಿರುತ್ತವೆ. ಇವೆರಡೂ ಪ್ಲಾನ್‌ಗಳು ಜಿಯೊ ಪ್ರೈಮ್ ಸದಸ್ಯರಿಗೆ ಮೀಸಲಾಗಿವೆ.
ಕಂಪನಿಯ ಸಮ್ಮರ್ ಸರ್ಪ್ರೈಸ್ ಕೊಡುಗೆಗೆ ಅರ್ಹರಾದವರಿಗೆ ಧನ್ ಧನಾ ಧನ್ ಅನ್ವಯವಾಗುವುದಿಲ್ಲ. ಪ್ರೈಮ್ ಸದಸ್ಯರಲ್ಲದವರಿಗೆ ಪ್ರತಿದಿನ ಒಂದು ಜಿಬಿ ಪ್ಲಾನ್‌ನ್ನು 408 ರೂ.ಗೆ ಮತ್ತು ಎರಡು ಜಿಬಿ ಪ್ಲಾನ್‌ನ್ನು 608 ರೂ.ಗಳಿಗೆ ನಿಗದಿಗೊಳಿಸಲಾಗಿದೆ. ಇವೆರಡೂ 84 ದಿನಗಳ ವ್ಯಾಲಿಡಿಟಿ ಹೊಂದಿರುತ್ತವೆ.
ಸಮ್ಮರ್ ಸರ್ಪ್ರೈಸ್ ಕೊಡುಗೆಗೆ ಅರ್ಹರಾದವರು 303 ರೂ.ಗಳ ರೀಚಾರ್ಜ್ ನೊಂದಿಗೆ ಹೆಚ್ಚುವರಿ ಮೂರು ತಿಂಗಳ ಅವಧಿಗೆ ಜಿಯೋದ ಕಾಫ್ಲಿಮೆಂಟರಿ ಸೇವೆಗಳನ್ನು ಪಡೆಯುತ್ತಾರೆ.