ಒಂದೇ ದಿನದಲ್ಲಿ ಪಾನ್ ಮತ್ತು ಟ್ಯಾನ್ ಸಂಖ್ಯೆ: ಸರಕಾರ

ಹೊಸದಿಲ್ಲಿ,ಎ.11: ವ್ಯವಹಾರ ನಿರ್ವಹಣೆಯನ್ನು ಇನ್ನಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ, ಪಾನ್ ಮತ್ತು ಟ್ಯಾನ್ ನಂಬರ್‌ಗಳನ್ನು ಒಂದೇ ದಿನದಲ್ಲಿ ನೀಡಲು ಆದಾಯ ತೆರಿಗೆ ಇಲಾಖೆಯು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದೊಂದಿಗೆ ಒಡಂಬಡಿಕೆ ಯೊಂದನ್ನು ಮಾಡಿಕೊಂಡಿದೆ.
ಅರ್ಜಿದಾರ ಕಂಪನಿಗಳು ಸಾಮಾನ್ಯ ಅರ್ಜಿ ನಮೂನೆ ‘ಸ್ಪೈಸ್’ನ್ನು ವಿತ್ತ ಸಚಿವಾಲಯದ ಜಾಲತಾಣದಲ್ಲಿ ಸಲ್ಲಿಸಿದಾಗ ಮತ್ತು ಸಚಿವಾಲಯವು ಕಂಪನಿಯ ದತ್ತಾಂಶಗಳನ್ನು ನೇರ ತೆರಿಗೆಗಳ ಮಂಡಳಿಗೆ ರವಾನಿಸಿದಾಗ ತಕ್ಷಣವೇ ಪಾನ್ ಮತ್ತು ಟ್ಯಾನ್ ಸಂಖ್ಯೆಗಳನ್ನು ನೀಡಲಾಗುತ್ತದೆ ಎಂದು ಸಚಿವಾಲಯದ ಹೇಳಿಕೆಯು ತಿಳಿಸಿದೆ.
ಮಾ.31ಕ್ಕೆ ಕೊನೆಗೊಂಡ ಹಿಂದಿನ ಹಣಕಾಸು ವರ್ಷದಲ್ಲಿ ಈ ವಿಧಾನದಲ್ಲಿ 19,704 ಹೊಸ ಕಂಪನಿಗಳಿಗೆ ಪಾನ್ ಸಂಖ್ಯೆ ನೀಡಲಾಗಿದೆ ಎಂದು ಅದು ಹೇಳಿದೆ.
ಆದಾಯ ತೆರಿಗೆ ಇಲಾಖೆಯು ವಿದ್ಯುನ್ಮಾನ ಪಾನ್ ಕಾರ್ಡ್‌ನ್ನೂ ಜಾರಿಗೊಳಿಸಿದೆ.
Next Story





