ಮಧ್ಯಪ್ರದೇಶದಲ್ಲಿ ಮೇ 1ರಿಂದ ಪ್ಲಾಸ್ಟಿಕ್, ಪಾಲಿಥೀನ್ ಬ್ಯಾಗ್‌ಗೆ ನಿಷೇಧ

ಭೋಪಾಲ,ಎ.11: ಮೇ 1ರಿಂದ ರಾಜ್ಯಾದ್ಯಂತ ಪ್ಲಾಸ್ಟಿಕ್ ಮತ್ತು ಪಾಲಿಥೀನ್ ಬ್ಯಾಗ್‌ಗಳನ್ನು ನಿಷೇಧಿಸಲು ಮಧ್ಯಪ್ರದೇಶ ಸರಕಾರವು ಮಂಗಳವಾರ ನಿರ್ಧರಿಸಿದೆ. ಇವುಗಳ ಬಳಕೆ ಭಾರೀ ಪ್ರಮಾಣದಲ್ಲಿ ಜಾನುವಾರುಗಳ ಸಾವಿಗೆ ಕಾರಣವಾಗಿದೆ ಎಂದು ಅದು ಹೇಳಿದೆ.
ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ಈ ವಿಷಯವನ್ನು ತಿಳಿಸಿದ ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ನರೋತ್ತಮ ಮಿಶ್ರಾ ಅವರು, ಪ್ಲಾಸ್ಟಿಕ್/ಪಾಲಿಥೀನ್ ಬ್ಯಾಗ್‌ಗಳನ್ನು ತಿನ್ನುವುದರಿಂದ ದನಗಳು ಸಾಯುತ್ತಿವೆ ಮತ್ತು ಇವುಗಳ ನಿಷೇಧ ಈ ಮೂಕಪ್ರಾಣಿಗಳ ಪ್ರಾಣಗಳನ್ನು ರಕ್ಷಿಸುತ್ತದೆ. ಜೊತೆಗೆ ಪ್ಲಾಸ್ಟಿಕ್/ಪಾಲಿಥೀನ್ ಬ್ಯಾಗ್‌ಗಳು ಪರಿಸರಕ್ಕೂ ಮಾರಕವಾಗಿವೆ ಎಂದರು.
Next Story