2016ರಲ್ಲಿ ದೇಶದಲ್ಲಿ 406 ಸ್ಫೋಟಗಳು

ಹೊಸದಿಲ್ಲಿ,ಎ.11: ಕಳೆದ ವರ್ಷ ದೇಶದಲ್ಲಿ ಒಟ್ಟು 406 ಸ್ಫೋಟ ಘಟನೆಗಳು ಸಂಭವಿಸಿದ್ದು, 118 ಜನರು ಸಾವನ್ನಪ್ಪಿದ್ದಾರೆ ಮತ್ತು 505 ಜನರು ಗಾಯಗೊಂಡಿದ್ದಾರೆ ಎಂದು ಕೇಂದ್ರ ಸಚಿವ ಗಂಗಾರಾಂ ಆಹಿರ್ ಅವರು ಮಂಗಳವಾರ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದರು.
ಎನ್‌ಎಸ್‌ಜಿಯ ರಾಷ್ಟ್ರೀಯ ಬಾಂಬ್ ದತ್ತಾಂಶ ಕೇಂದ್ರ(ಎನ್‌ನಿಡಿಸಿ)ದ ಅಂಕಿಸಂಖ್ಯೆಗಳನ್ನು ಉಲ್ಲೇಖಿಸಿದ ಅವರು, ಇವು ಅವಘಡ ಸ್ವರೂಪದ ಸ್ಫೋಟಗಳು ಸೇರಿದಂತೆ ಎಲ್ಲ ದೊಡ್ಡ ಮತ್ತು ಸಣ್ಣ ಐಇಡಿ ಸ್ಫೋಟಗಳ ಘಟನೆಗಳನ್ನು ಒಳಗೊಂಡಿವೆ ಎಂದು ಹೇಳಿದರು.
Next Story