ಘನತ್ಯಾಜ್ಯ ನಿರ್ವಹಣೆ: ಸಂಘ,ಸಂಸ್ಥೆಗಳು ಕೈ ಜೋಡಿಸಲು ಕರೆ
ಉಡುಪಿ, ಎ.11: ಉಡುಪಿ ನಗರಸಭೆ ಸ್ವಚ್ಚ ಭಾರತ್ ಅಭಿಯಾನದ ಅಂಗವಾಗಿ ಸಾರ್ವಜನಿಕರಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಯೋಜಿಸಿದೆ. ಇದರಲ್ಲಿ ಈಗಾಗಲೇ ರಾಮಕೃಷ್ಣ ಆಶ್ರಮ ಮಂಗಳೂರು ಹಾಗೂ ಉಡುಪಿಯ ಆರ್ಟ್ ಆಫ್ ಲಿವೀಂಗ್ ಸಂಸ್ಥೆಗಳು ನಗರಸಭೆಯೊಂದಿಗೆ ಕೈ ಜೋಡಿಸಿವೆ.
ಈ ನಿಟ್ಟಿನಲ್ಲಿ ಯಾವುದಾದರು ಇತರ ಸಂಘ ಸಂಸ್ಥೆಗಳು ನಗರಸಭೆಯೊಂದಿಗೆ ಕೈಜೋಡಿಸಲು ಉತ್ಸುಕರಾಗಿದ್ದಲ್ಲಿ ಅವಿನಾಶ್ ಕಾಮತ್ (ಮೊ. 9844471566) ಹಾಗೂ ಅಶೋಕ್ ಕಿಣಿ (ಮೊ.9448611104, )ಅವರನ್ನು ಸಂಪರ್ಕಿಸಬಹುದು. ಈ ಬಗ್ಗೆ ಪೂರ್ವಭಾವಿ ಸಮಾಲೋಚನಾ ಸಭೆಯು ಎ.13ರಂದು ಸಂಜೆ 5:00ಕ್ಕೆ ಉದ್ಯಾವರದ ಆರ್ಟ್ ಆಫ್ ಲಿವೀಂಗ್ ಸಂಸ್ಥೆಯಲ್ಲಿ ನಡೆಯಲಿದೆ.
ಆಸಕ್ತ ಸಂಘ,ಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸುವಂತೆ ಪೌರಾಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





