ಮಂಗಳೂರು ಪೋಲಿಸ್ ದೌರ್ಜನ್ಯ: ಮುಸ್ಲಿಂ ಐಕ್ಯತಾ ವೇದಿಕೆಯಿಂದ ಖಂಡನೆ

ತಬೂಕ್, ಎ.11: ಸೌದಿ ಅರೇಬಿಯಾದ ತಬೂಕಿನಲ್ಲಿರುವ ಅನಿವಾಸಿ ಭಾರತೀಯರ ಮುಸ್ಲಿಂ ಸಂಘಟನೆಗಳ ಪ್ರತಿನಿಧಿಗಳ ಸಭೆಯು ತಬೂಕಿನ ಫ್ರಟರ್ನಿಟಿ ಹೌಸ್ ನಲ್ಲಿ ಜರಗಿತು.
ಇಂಡಿಯಾ ಫ್ರೆಟರ್ನಿಟಿ ಫೋರಂ (iff), ದಕ್ಷಿಣ ಕರ್ಣಾಟಕ ಸುನ್ನೀ ಸೆಂಟರ್ (dksc), ದಾರುನ್ನೂರು ಎಜ್ಯುಕೇಷನ್ ಸೆಂಟರ್ (dec), ಕರ್ನಾಟಕ ಕಲ್ಚರಲ್ ಪೌಂಡೇಷನ್ (kcf), ಹಾಗೂ ಇಂಡಿಯನ್ ಸೋಶಿಯಲ್ ಫೋರಂ (isf) ಪ್ರತಿನಿಧಿಗಳು ಭಾಗವಹಿಸಿದ ಸಭೆಯಲ್ಲಿ, ಇತ್ತೀಚೆಗೆ ಮಂಗಳೂರಿನಲ್ಲಿ ಅಹ್ಮದ್ ಖುರೈಷಿ ಎಂಬವರ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಘಟನೆಯನ್ನು ಹಾಗೂ ನ್ಯಾಯಕ್ಕಾಗಿ ಪ್ರತಿಭಟಿಸುತ್ತಿದ್ದವರ ಮೇಲೆ ನಡೆದ ಲಾಠಿ ಪ್ರಹಾರವನ್ನು ಖಂಡಿಸಲಾಯಿತು.
ಪೋಲೀಸ್ ದೌರ್ಜನ್ಯಕ್ಕೆ ತುತ್ತಾಗಿರುವ ಯುವಕರಿಗೆ ಸರಕಾರ ಸೂಕ್ತ ಪರಿಹಾರವನ್ನು ನೀಡಬೇಕು ಮತ್ತು ತಪ್ಪಿತಸ್ತ ಅಧಿಕಾರಿಗಳ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಂ ಐಕ್ಯತಾ ವೇದಿಕೆ ಆಗ್ರಹಿಸಿತು.
Next Story





