Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕೋಸ್ಟಲ್‌ವುಡ್ ಕ್ರಿಕೆಟ್ ಪ್ರೀಮಿಯರ್‌...

ಕೋಸ್ಟಲ್‌ವುಡ್ ಕ್ರಿಕೆಟ್ ಪ್ರೀಮಿಯರ್‌ ಲೀಗ್ ಉದ್ಘಾಟನೆ

ವಾರ್ತಾಭಾರತಿವಾರ್ತಾಭಾರತಿ11 April 2017 11:49 PM IST
share
ಕೋಸ್ಟಲ್‌ವುಡ್ ಕ್ರಿಕೆಟ್ ಪ್ರೀಮಿಯರ್‌ ಲೀಗ್ ಉದ್ಘಾಟನೆ

ಮಂಗಳೂರು, ಎ. 11: ತುಳು ಚಿತ್ರರಂಗದ ಕಲಾವಿದರು ಮತ್ತು ತಂತ್ರಜ್ಞರ ಸಾಂಸ್ಕೃತಿಕ ಸಂಘಟನೆಯು ನಗರದ ನೆಹರೂ ಮೈದಾನದಲ್ಲಿ ಆಯೋಜಿಸಿರುವ ಸುರಕ್ಷಾ ಕೋಸ್ಟಲ್‌ವುಡ್ ಕ್ರಿಕೆಟ್ ಪ್ರೀಮಿಯರ್‌ ಲೀಗ್ ಪಂದ್ಯಾಟವು ಇಂದು ಉದ್ಘಾಟನೆಗೊಂಡಿತು.

ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ನಟ ದೇವದಾಸ್ ಕಾಪಿಕಾಡ್, ನಿತ್ಯ ಬೇರೆ ಬೇರೆ ಕಡೆಗಳಲ್ಲಿ ತಮ್ಮ ಕಾಯಕದಲ್ಲಿ ತೊಡಗಿರುವ ಚಿತ್ರರಂಗದ ಮಂದಿ ಇಂದು ಒಂದೇ ಮೈದಾನದಲ್ಲಿ ಬೆರೆತಿರುವುದು ಖುಷಿ ತಂದಿದೆ. ಇಲ್ಲಿ ಆಟದ ಜಯಕ್ಕಾಗಿ ಪರಸ್ಪರ ಹೋರಾಡುವ ತಂಡಗಳು, ಸೋಲು -ಗೆಲುವು ಏನೇ ಇದ್ದರೂ, ಗೆಲುವು ಎಲ್ಲರದು ಎಂದು ತಿಳಿಯಬೇಕು. ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಕಲಾಲೋಕದ ಅಭಿವೃದ್ಧಿಗಾಗಿ ದುಡಿಯಬೇಕು ಎಂದರು.

ಹಿರಿಯ ನಟ ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು ಪಂದ್ಯಾವಳಿಗೆ ಶುಭಕೋರಿದರು.

ಕಾಟ್ಕಾ (ಕೋಸ್ಟಲ್‌ವುಡ್ ಕಲಾವಿದರು ಮತ್ತು ತಂತ್ರಜ್ಞರ ಸಾಂಸ್ಕೃತಿಕ ಸಂಘಟನೆ)ದ ಅಧ್ಯಕ್ಷರಾದ ಅಶ್ವಿನಿ ಕೋಟ್ಯಾನ್, ಉಪಾಧ್ಯಕ್ಷ ರಾಜೇಶ್ ಬಂದ್ಯೋಡು ಪದಾಧಿಕಾರಿಗಳಾದ ರಾಜೇಶ್ ಸ್ಕೈಲಾಕ್, ನಾಯಕ ಮೊದಲಾದವರು ಉಪಸ್ಥಿತರಿದ್ದರು.

ಅತಿಥಿಗಳಾಗಿ ಜಯಕುಮಾರ್ ಕೊಡಿಯಾಲ್ ಬೈಲ್, ದೇವದಾಸ್ ಪಾಂಡೇಶ್ವರ್, ಅರವಿಂದ ಬೋಳಾರ್, ಮಿಥುನ್‌ ರೈ, ಶರ್ಮಿಳಾ ಕಾಪಿಕಾಡ್, ಸಪ್ನಾ, ಯೋಗೇಶ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸುಧಾಕರ್ ಬನ್ನಂಜೆ, ರಾಜೇಶ್ ಬ್ರಹ್ಮಾವರ್, ಮಹಾಬಲ ಮಾರ್ಲ, ವಿಠ್ಠಲ ಶೆಣೈ ಮತ್ತು ತಂಡಗಳ ಮಾಲಕರು, ಪ್ರಾಯೋಜಕರು ಭಾಗವಹಿಸಿದ್ದರು. ಪಂದ್ಯ ಕೂಟದಲ್ಲಿ ಚಿತ್ರರಂಗದ ಎಂಟು ತಂಡ ಭಾಗವಹಿಸಿದ್ದವು.

ಕಡಂದಲೆ ಟೈಗರ್ಸ್‌ಗೆ ಜಯ: ಉದ್ಘಾಟನೆಯ ಬಳಿಕ ಜರಗಿದ ಲೀಗ್ ಹಂತದ ಮೊದಲ ಪಂದ್ಯದಲ್ಲಿ ಕಡಂದಲೆ ಟೈಗರ್ಸ್‌ ತಂಡವು ಕೊಡಿಯಾಲ್‌ಬೈಲ್‌ ಚಾಲೆಂಜರ್ಸ್‌ ತಂಡವನ್ನು 23 ರನ್‌ಗಳ ಅಂತರದಿಂದ ಪರಾಜಯಗೊಳಿಸಿತು. ಕಡಂದಲೆ ತಂಡವು ಸುಹಾಸ್ ರೈ ಯವರ 5 ಸಿಕ್ಸರ್ 3 ಬೌಂಡರಿಗಳನ್ನೊಳಗೊಂಡ 46 ರನ್ ಗಳ ನೆರನಿಂದ 10 ಓವರ್ ಗಳಲ್ಲಿ 5 ವಿಕೆಟ್‌ಗಳ ನಷ್ಟದಲ್ಲಿ 95 ರನ್‌ಗಳನ್ನು ಗಳಿಸಿತು. ಕೀರ್ತನ್ 26ಕ್ಕೆ 3, ಸೂರಜ್ 24ಕ್ಕೆ 2 ವಿಕೆಟ್‌ಗಳನ್ನು ಪಡೆದರು.

ಇದಕ್ಕೆ ಉತ್ತರವಾಗಿ ಕೊಡಿಯಾಲ್‌ಬೈಲ್ ತಂಡವು 6 ವಿಕೆಟ್‌ಗಳ ನಷ್ಟದಲ್ಲಿ 76 ರನ್‌ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಸೂರಜ್ 34, ಮನೋಜ್ 14 ರನ್ ಗಳಿಸಿದರೆ ಸಂತೋಷ್ ಮತ್ತು ಅರುಣ್ ಶೆಟ್ಟಿ ತಲಾ 2 ವಿಕೆಟ್‌ಗಳನ್ನು ಪಡೆದರು.

ಬ್ರಾಂಡ್ ವಿಷನ್‌ಗೆ ಗೆಲುವು: ದಿನದ ಎರಡನೆಯ ಪಂದ್ಯದಲ್ಲಿ ಬ್ರ್ಯಾಂಡ್ ವಿಷನ್‌ ಟಸ್ಕರ್‌ ತಂಡವು ಆಸ್ಕರ್ ಮತ್ತು ಸಂಪತ್ ಎಸ್.ರವರ ತಲಾ 21 ರನ್‌ಗಳ ಸಹಾಯದಿಂದ 10 ಓವರ್ ಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು 92 ರನ್‌ಗಳನ್ನು ಗಳಿಸಿತು. ರಾಖೇಶ್ 19ಕ್ಕೆ 2 ವಿಕೆಟ್ ಪಡೆದರು. ಬ್ರಾಂಡ್ ವಿಷನ್‌ನ ಸಂಪತ್ (16ಕ್ಕೆ 2), ಸಚೀಂದ್ರ (14ಕ್ಕೆ 3) ರ ಉತ್ತಮ ಬೌಲಿಂಗ್ ಎದುರು 10 ಓವರುಗಳಲ್ಲಿ 19 ಓಟಗಳನ್ನು ಮಾತ್ರ ಗಳಿಸಲು ಶಕ್ತವಾಗಿ 33 ಓಟಗಳಿಂದ ಸೋಲನ್ನು ಕಂಡಿತು.

ತುಳುನಾಡ ಪ್ಯಾಂಥರ್ಸ್‌ಗೆ ಜಯ: ದಿನದ ಕೊನೆಯ ಪಂದ್ಯದಲ್ಲಿ ತುಳುನಾಡ ಪ್ಯಾಂಥರ್ಸ್‌ ತಂಡವು ರಜತ್‌ರ 48 ಹಾಗೂ ಗಣೇಶ್‌ರ 22 ರನ್ ಗಳ ನೆರವಿನಿಂದ 10 ಓವರ್ ಗಳಲ್ಲಿ 6 ವಿಕೆಟುಗಳನ್ನು ಕಳೆದುಕೊಂಡು 96 ರನ್‌ಗಳನ್ನು ದಾಖಲಿಸಿತ್ತು. ಇದಕ್ಕುತ್ತರವಾಗಿ ರಾಯಲ್ ರೇಂಜರ್ಸ್‌ ತಂಡದ ಚರಣ್ (23ಕ್ಕೆ 3), ಪ್ರಶಾಂತ್‌ರವರ (18ಕ್ಕೆ 4 ವಿಕೆಟ್) ಮಾರಕ ಬೌಲಿಂಗ್‌ಗೆ ಸಿಲುಕಿ 10 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 72 ರನ್‌ಗಳನ್ನು ಮಾತ್ರ ಗಳಿಸಿ ಸೋಲನ್ನು ಕಂಡಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X