ಕುಲಭೂಷಣ್ ಜಾಧವ್ ಗೆ ಮರಣದಂಡನೆ ಯಾಕೆ ? ಅಮೆರಿಕದ ರಕ್ಷಣಾ ತಜ್ಞರ ಪ್ರಶ್ನೆ

ವಾಷಿಂಗ್ಟನ್, ಎ.12: ಭಾರತದ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಯಾಕೆ ಗಲ್ಲು ಶಿಕ್ಷೆ ವಿಧಿಸಲಾಗಿದೆ ?ಎಂದು ಅಮೆರಿಕದ ರಕ್ಷಣಾ ತಜ್ಞರು ಪ್ರಶ್ನಿಸಿದ್ದಾರೆ.ಪ್ರಶ್ನಿಸಿದ್ದಾರೆ.
ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿರುವ ವಿಚಾರವು ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಇನ್ನಷ್ಟು ಹದಗೆಡಲು ಕಾರಣವಾಗಿದೆ
ಕುಲಭೂಷಣ್ ಜಾಧವ್ ಗೂಢಚಾರಿ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಲಾಗುತ್ತಿದೆ. ಹೀಗಿರುವಾಗ ಕುಲಭೂಷಣ್ ಜಾದವ್ ಗೆ ಗಲ್ಲು ಶಿಕ್ಷೆ ವಿಧಿಸಿರುವುದು ಏಕೆ? ಎಂದು ಅಮೆರಿಕದ ಮಾಜಿ ರಕ್ಷಣಾ ಅಧಿಕಾರಿ ಅಲಿಸ್ಸಾ ಅಐರ್ಸ್ ಪ್ರಶ್ನಿಸಿದ್ದಾರೆ.
ಅಟ್ಲಾಂಟಿಕ್ ಕೌನ್ಸಿಲ್ ನ ದಕ್ಷಿಣ ಏಷ್ಯಾ ಕೇಂದ್ರದ ನಿರ್ದೇಶಕ ಭರತ್ ಗೋಪಾಲಸ್ವಾಮಿ ಅವರು "ಕುಲಭೂಷಣ್ ಜಾದವ್ ವಿಚಾರದಲ್ಲಿ ಸಾಕ್ಷ್ಯಾಧಾರಗಳು ರಾಜಕೀಯ ಪ್ರೇರಿತವಾಗಿದ್ದು, ಪಾಕಿಸ್ತಾನದ ರಕ್ಷಣಾ ಅಧಿಕಾರಿಗಳ ಸಾಕ್ಷ್ಯಾಧಾರಗಳು ನಂಬಿಕೆ ಅರ್ಹವೇ ಎಂಬ ಪ್ರಶ್ನೆ ಮೂಡುತ್ತಿದೆ "ಎಂದು ಅಭಿಪ್ರಾಯಪಟ್ಟಿದ್ದಾರೆ.





