ದೇವಳದಿಂದ ಲಕ್ಷಾಂತರ ಮೌಲ್ಯದ ನಗ-ನಗದು ಕಳವು

ಉಪ್ಪಿನಂಗಡಿ, ಎ.12: ದೇವಳವೊಂದಕ್ಕೆ ನುಗ್ಗಿದ ಕಳ್ಳರು ನಗದು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿಯನ್ನು ಕದ್ದೊಯ್ದ ಘಟನೆ ಶಿರಾಡಿ ಗ್ರಾಮದ ಅಮ್ಮಾಜೆ ಎಂಬಲ್ಲಿ ನಡೆದಿದೆ.
ಅಮ್ಮಾಜೆ ದುರ್ಗಾಪರಮೇಶ್ವರಿ ದೇವಳದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ದೇವಳದಲ್ಲಿದ್ದ ಬೆಳ್ಳಿಯ ಪ್ರಭಾವಳಿ, 5 ಪವನ್ ಚಿನ್ನ, 25 ಸಾವಿರ ರೂ. ಹಾಗೂ ಬೆಳ್ಳಿಯ ಇತರ ವಸ್ತುಗಳು ಸೇರಿದಂತೆ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ಕಳವುಗೈದಿದ್ದಾರೆ. ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಶ್ವಾನದಳ, ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story





