ಬೊಳ್ಳೂರು ಎಸ್ ಕೆಎಸ್ ಬಿವಿಯಿಂದ ಜಲಜಾಗೃತಿ ಅಭಿಯಾನ

ಬೊಳ್ಳೂರು, ಎ.12: ಎಸ್ ಕೆಎಸ್ ಬಿವಿ ಬೊಳ್ಳೂರು ಆಶ್ರಯದಲ್ಲಿ "ನಾಳಿನ ಉಳಿವಿಗಾಗಿ ಜೀವ ಹನಿಗಳ ಸಂರಕ್ಷಿಸಿಡೋಣ" ಎಂಬ ಧ್ಯೇಯ ವಾಕ್ಯದೊಂದಿಗೆ ಇಂದಿರಾನಗರ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಜಲಜಾಗೃತಿ ಅಭಿಯಾನ ಕಾರ್ಯಕ್ರಮವು ಜರಗಿತು.
ಕಾರ್ಯಕ್ರಮವನ್ನು ಶೈಖುನಾ ಬೊಳ್ಳೂರು ಉಸ್ತಾದರು ಉದ್ಘಾಟಿಸಿದರು. ಹಾಜಿ ಎ.ಕೆ.ಜಿಲಾನಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಬೊಳ್ಳೂರು ಸದರ್ ಮುಅಲ್ಲಿಮರಾದ ಲತೀಫ್ ಫೈಝಿ ಜಲಜಾಗೃತಿ ಪ್ರತಿಜ್ಞೆ ಭೋದಿಸಿ ಮುಖ್ಯ ಪ್ರಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಬೊಳ್ಳೂರು ಜುಮಾ ಮಸೀದಿಯ ಉಪಾಧ್ಯಕ್ಷ ಎಂ.ಅಬ್ದುಲ್ ಖಾದರ್, ಜೊತೆ ಕಾರ್ಯದರ್ಶಿ ಬಿ.ಎಂ. ಕರೀಮ್,ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ವಸಂತ ಬೆರ್ನಾಡ್, ಅಝೀಝ್ ಐ.ಎ.ಕೆ. ಮೊದಲಾದವರು ಉಪಸ್ಥಿತರಿದ್ದರು.
Next Story





