ಎ.14rರಿಂದ 22ರವರೆಗೆ ಕಣ್ಣಂಗಾರ್ ಉರೂಸ್
15ರಂದು ಎ.ಪಿ. ಉಸ್ತಾದ್ ಭಾಗಿ, 22ರಂದು ಸಿಎಂ ಆಗಮನದ ನಿರೀಕ್ಷೆ

ಪಡುಬಿದ್ರೆ, ಎ.12: ಇತಿಹಾಸ ಪ್ರಸಿದ್ಧ ಕಣ್ಣಂಗಾರ್ ಜುಮ್ಮಾ ಮಸೀದಿ ಶೈಖುನಾ ಸಿರಾಜುದ್ದೀನ್ ವಲಿಯುಲ್ಲಾಹಿ ದರ್ಗಾ ಶರೀಫ್ ಕಣ್ಣಂಗಾರ್ ಉರೂಸ್ ಎ.14ರಿಂದ 22ರವರೆಗೆ ನಡೆಯಲಿದೆ.
ಬುಧವಾರ ಕಾಪು ಪ್ರೆಸ್ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಉರೂಸ್ ಸಮಿತಿ ಅಧ್ಯಕ್ಷ ಯು.ಕೆ.ಅಬ್ದುಲ್ ಹಮೀದ್ ಮಾತನಾಡಿ, ಈ ಬಾರಿಯ ಉರೂಸ್ ಸಮಾರಂಭಕ್ಕೆ ದರ್ಗಾದ ಮೇಲ್ಚಾವಣಿ ಹಾಗೂ ಮಸೀದಿಯ ನೆಲಹಾಸನ್ನು ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ಸಿದ್ಧಪಡಿಸಲಾಗಿದೆ. 10 ಸಾವಿರಕ್ಕೂ ಅಧಿಕ ಮಂದಿ ಉರೂಸ್ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. 14ರಂದು ಜುಮಾ ನಮಾಜಿನ ಬಳಿಕ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮಗ್ರಿಬ್ ನಮಾಜಿನ ಬಳಿಕ ಉಳ್ಳಾಲ ಸಂಯುಕ್ತ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ದುವಾ ನೆರವೇರಸಲಿದ್ದು, ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಉರೂಸ್‌ಗೆ ಚಾಲನೆ ನೀಡಲಿದ್ದಾರೆ.
ಕನ್ನಂಗಾರ್ ಮುದರ್ರಿಸ್ ಅಲ್ಹಾಜ್ ಅಶ್ರಫ್ ಸಖಾಫಿ ಕಿನ್ಯ ಪ್ರಭಾಷಣ ಮಾಡಲಿದ್ದಾರೆ. 15ರಂದು ಅಖಿಲ ಭಾರತ ಸುನ್ನೀ ಜಂ ಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಮುಖ್ಯ ಭಾಷಣ ಮಾಡಲಿದ್ದು, ಅಲ್‌ಮದೀನಾ ಪ್ರಾಂಶುಪಾಲರಾದ ಎಂ.ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ ಭಾಗವಹಿಸಲಿದ್ದಾರೆ.
16ರಂದು ಕೆ.ಎಸ್.ಜಅಫರ್ ತಂಙಳ್ ಕುಂಬೋಳ್ ನೇತೃತ್ವದಲ್ಲಿ ಜಲಾಲಿಯ್ಯ ದ್ಸಿಕ್ರ್ ನಡೆಯಲಿದ್ದು, ಪೇರೋಡ್ ಅಬ್ದುಲ್ ರಹಿಮಾನ್ ಸಖಾಫಿ ಮುಖ್ಯಬಾಷಣ ಮಾಡಲಿದ್ದಾರೆ. 17ರಂದು ಸೈಯದ್ ಜಅಫರ್ ಸಖಾಫ್ ತಂಙಳ್ ಕೋಟೇಶ್ವರ ದುವಾ ನೆರವೇರಿಸಲಿದ್ದು, 17ಮತ್ತು 18ರಂದು ಮುಳ್ಳೂರುಕರೆ ಮುಹಮ್ಮದ್ ಅಲಿ ಸಖಾಫಿ ಮುಖ್ಯಭಾಷಣ ಮಾಡಲಿದ್ದಾರೆ. 19ರಂದು ತಾಜುಶ್ಶರೀಅ ಎಂ. ಅಲಿಕುಂಞಿ ಮುಸ್ಲಿಯಾರ್ ಸಿರಿಯಾ ದುಆ ನೆರವೇರಿಸಲಿದ್ದು, ಮುಹಮ್ಮದ್ ಫಾರೂಕ್ ನಹೀಮಿ ಕೊಲ್ಲಂ ಮುಖ್ಯಭಾಷಣ ಮಾಡಲಿದ್ದಾರೆ. 20ರಂದು ಸೈಯದ್ ಅಬ್ದುಲ್ ರಹಿಮಾನ್ ಇಂಬಿಚ್ಚಿಕೋಯ ತಂಙಳ್ ಬಾಯರ್ ದುಆ ನೆರವೇರಿಸಲಿದ್ದು, ಮುಹಮ್ಮದ್ ನೌಫಲ್ ಸಖಾಫಿ ಕಳಸ ಮುಖ್ಯಭಾಷಣ ಮಾಡಲಿದ್ದಾರೆ. 21ರಂದು ಪಿ.ಮುಹಮ್ಮದ್ ಬಾಖವಿ ಪೂಂಜಾಲಕಟ್ಟೆ ದುವಾ ನೆರವೇರಿಸಲಿದ್ದು, ಕೆ.ಪಿ.ಹುಸೈನ್ ಸಅದಿ ಕೆ.ಸಿ,ರೋಡ್ ಮುಖ್ಯಭಾಷಣ ಮಾಡಲಿದ್ದಾರೆ.
22ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಅಸ್ಸೈಯದ್ ಇಬ್ರಾಹಿಂ ಖಲೀಲುಲ್ ಬುಖಾರಿ ಕಡಲುಂಡಿ, ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್, ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಳ್ಕಟ್ಟೆ, ಕಾಪು ಶಾಸಕ ವಿನಯಕುಮಾರ್ ಸೊರಕೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಸಚಿವರಾದ ತನ್ವೀರ್ ಸೇಠ್, ಯು.ಟಿ.ಖಾದರ್ ಬಾಗವಹಿಸಲಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉರೂಸ್ ಸಮಾರಂಭಕ್ಕೆ ಬರುವ ನಿರೀಕ್ಷೆ ಇದೆ ಎಂದು ಅಬ್ದುಲ್ ಹಮೀದ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಬಿಲೀಫ್ ಮೊಯ್ದು ಹಾಜಿ, ಕಾರ್ಯದರ್ಶಿ ರಶೀದ್ ಗುಂಡಿ, ಜತೆಕಾರ್ಯದರ್ಶಿ ಟಿ.ಎಂ.ಬಾವ, ಸದಸ್ಯರಾದ ಖಬೀರ್ ಕಣ್ಣಂಗಾರ್ ಉಪಸ್ಥಿತರಿದ್ದರು.
ಜಮಾಅತ್‌ನ ವಿಶೇಷತೆ: ಕಣ್ಣಂಗಾರ್ ಜಮಾಅತ್ ಉಡುಪಿ ಜಿಲ್ಲೆಯ ಅತೀ ದೊಡ್ಡ ಜಮಾಅತ್‌ಗಳಲ್ಲಿ ಒಂದು. ಜುಮಾ ಮಸೀದಿ ಅಧೀನದಲ್ಲಿ ಒಂಬತ್ತು ಮಸೀದಿ ಮತ್ತು ಮದ್ರಸಗಳು ಒಳಗೊಂಡಿದೆ. 800ಕ್ಕೂ ಅಧಿಕ ಮನೆಗಳಿವೆ. 700ಕ್ಕೂ ಅಧಿಕ ಮದ್ರಸ ವಿದ್ಯಾರ್ಥಿಗಳು ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದಾರೆ. 40 ವಿದ್ಯಾರ್ಥಿಗಳು ಹಿಪ್ಲುಳ್ ಕುರ್‌ಆನ್ ಕಲಿಯುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಶರೀಅತ್ ಕಾಲೇಜುಗಳಿದ್ದು, 50 ವಿದ್ಯಾರ್ಥಿಗಳು ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದಾರೆ. ಜಮಾಅತ್‌ನ ಅಧೀನದಲ್ಲಿ ಹೈಬಾ ವಾಣಿಜ್ಯ ಸಂಕೀರ್ಣ, ಹೈಬಾ ರೆಸಿಡೆನ್ಸಿ ಹಾಗೂ ಸಮಾರಂಭ ಸಭಾಂಗಣ ಇದೆ.







