ಕಲಾಭವನ್ ಮಣಿ ಪ್ರಕರಣ ಸಿಬಿಐ ತನಿಖೆ ನಡೆಸಲಿ: ಕೇರಳ ಹೈಕೋರ್ಟು

ಕೊಚ್ಚಿ, ಎ. 12: ನಟ ಕಲಾಭವನ್ ಮಣಿ ಸಾವು ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿ ಕೇರಳ ಹೈಕೋರ್ಟು ಆದೇಶಿಸಿದೆ. ಒಂದು ತಿಂಗಳೊಳಗೆ ಪ್ರಕರಣವನ್ನು ವಹಿಸಿಕೊಂಡು ತನಿಖೆ ಆರಂಭಿಸಬೇಕೆಂದು ಹೈಕೋರ್ಟು ಸೂಚಿಸಿದೆ. ಮಣಿಯ ಸಹೋದರ ಆರ್‌ಎಲ್‌ವಿ ರಾಮಕೃಷ್ಣನ್ ನೀಡಿದ ಅರ್ಜಿಯನ್ನು ಹೈಕೋರ್ಟು ಪರಿಗಣಿಸಿದ್ದು, ಕಲಾಭವನ್ ಮಣಿಯ ಸಾವಿನ ಕುರಿತ ನಿಗೂಢತೆಯನ್ನು ನಿವಾರಿಸಬೇಕೆಂದು ರಾಮಕೃಷ್ಣನ್ ಹೈಕೋರ್ಟುನ್ನು ಆಗ್ರಹಿಸಿದ್ದರು.
ಈ ಹಿಂದೆ ಕೋರ್ಟು ಸಿಬಿಐಯೊಂದಿಗೆ ಸ್ಪಷ್ಟೀಕರಣ ಕೇಳಿತ್ತು. ಆಗ ಸಿಬಿಐ ಕೇಸನ್ನು ವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೋರ್ಟಿಗೆ ತಿಳಿಸಿತ್ತು. ರಾಸಾಯನಿಕ ಪರೀಕ್ಷೆ ಸಹಿತ ವಿವರವಾದ ತನಿಖೆಯನ್ನು ನಡೆಸಲಾಗಿದೆ ಆದ್ದರಿಂದ ಪ್ರಕರಣದ ತನಿಖೆಯನ್ನು ವಹಿಸಿಕೊಳ್ಳುವ ಅಗತ್ಯವಿಲ್ಲ ಎಂದು ಕೋರ್ಟಿಗೆ ಸಿಬಿಐ ತಿಳಿಸಿತ್ತು. ಆದರೆ ಕೋರ್ಟು ಈಗ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿಕೊಟ್ಟಿದೆ.
Next Story