Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮೇ1 ರಿಂದ 5 ನಗರಗಳಲ್ಲಿ ಪ್ರತಿದಿನವೂ...

ಮೇ1 ರಿಂದ 5 ನಗರಗಳಲ್ಲಿ ಪ್ರತಿದಿನವೂ ಇಂಧನ ಬೆಲೆಯಲ್ಲಿ ಬದಲಾವಣೆ ?

ವಾರ್ತಾಭಾರತಿವಾರ್ತಾಭಾರತಿ12 April 2017 5:50 PM IST
share
ಮೇ1 ರಿಂದ 5 ನಗರಗಳಲ್ಲಿ ಪ್ರತಿದಿನವೂ ಇಂಧನ ಬೆಲೆಯಲ್ಲಿ ಬದಲಾವಣೆ ?

ಹೊಸದಿಲ್ಲಿ, ಎ.12: ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಮೇ 1ರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಗಳ ತೈಲ ದರಗಳಿಗೆ ಅನುಗುಣವಾಗಿ ಪ್ರತಿ ದಿನವೂ ಪರಿಷ್ಕರಿಸಲು ಸರಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ನಿರ್ಧರಿಸಿವೆ.

ದೇಶದಲ್ಲಿ ಶೇ.95ಕ್ಕೂ ಅಧಿಕ ಅಂದರೆ ಸುಮಾರು 58 ಸಾವಿರ ಪೆಟ್ರೋಲ್ ಬಂಕ್‌ಗಳನ್ನು ಹೊಂದಿರುವ ಸರಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳಾದ ಇಂಡಿಯನ್ ಆಯಿಲ್ (ಐಓಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿ.(ಎಚ್‌ಪಿಸಿಎಲ್), ಮೇ 1ರಿಂದ ಐದು ಆಯ್ದ ನಗರಗಳಲ್ಲಿ ದೈನಂದಿನ ದರ ಪರಿಷ್ಕರಣೆಯ ಪೈಲಟ್ ಕಾರ್ಯಕ್ರಮವನ್ನು ಜಾರಿಗೊಳಿಸಲಿದೆ ಹಾಗೂ ಕ್ರಮೇಣ ಅದನ್ನು ದೇಶಾದ್ಯಂತ ವಿಸ್ತರಿಸಲಿವೆ.

ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೊಸದಿಲ್ಲಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸುತ್ತಾ,'' ಮಾರುಕಟ್ಟೆಯಲ್ಲಿ ಹಸ್ತಕ್ಷೇಪ ನಡೆಸದೆ ಇರುವ ನೀತಿಗೆ ಸರಕಾರ ಬದ್ಧವಾಗಿದೆೆ'' ಎಂದರು.

ರಾಜಕೀಯದಿಂದ ಹಿಡಿದು ಅರ್ಥಿಕ ರಾಜತಾಂತ್ರಿಕತೆಯ ತನಕ, ಮಾರುಕಟ್ಟೆಯ ವಿವಿಧ ಚಲನಶೀಲತೆಯನ್ನು ಆಧರಿಸಿ ತೈಲ ದರ ನಿಗದಿಪಡಿಸಲು ಅವಕಾಶ ನೀಡಲಾಗುವುದು ಎಂದವರು ತಿಳಿಸಿದರು. ''ಆದಾಗ್ಯೂ, ತೈಲ ದರಗಳ ದೈನಂದಿನ ಪರಿಷ್ಕರಿಸುವ ತನ್ನ ನಿರ್ಧಾರವವನ್ನು ಸರಕಾರವು ತೈಲ ಕಂಪೆನಿಗಳ ಮೇಲೆ ಬಲವಂತವಾಗಿ ಹೇರುವುದಿಲ್ಲ. ಎಂದು ಸ್ಪಷ್ಟಪಡಿಸಿದ ಅವರು, ಪೆಟ್ರೋಲಿಯಂ ಉತ್ಪನ್ನಗಳ ದೈನಂದಿನ ದರ ಬದಲಾವಣೆಯ ಪದ್ಧತಿಯನ್ನು ಜಾರಿಗೊಳಿಸಬೇಕೆಂಬುದು ತಜ್ಞರ ಶಿಫಾರಸಾಗಿದೆ. ಇದರ ಸರಕಾರದ ಯಾವುದೇ ಪಾತ್ರವಿಲ್ಲ'' ಎಂದರು.

ಪೆಟ್ರೋಲ್ ಹಾಗೂ ಡೀಸೆಲ್ ದರಗಳ ದೈನಂದಿನ ಪರಿಷ್ಕರಣೆಯ ಪೈಲಟ್ ಕಾರ್ಯಕ್ರಮವು ಮೊದಲಿಗೆ ಪುದುಚ್ಚೇರಿ, ಆಂಧ್ರಪ್ರದೇಶದ ವಿಶಾಖಪಟ್ಟಣ, ರಾಜಸ್ಥಾನದ ಉದಯಪುರ, ಜಾರ್ಖಂಡ್‌ನ ಜಮಶ್ಯೆಡ್‌ಪುರ ಹಾಗೂ ಚಂಡೀಗಢಗಳಲ್ಲಿ ಜಾರಿಗೆ ಬರಲಿದೆ.

ಪ್ರಸ್ತುತ ತೈಲ ಮಾರಾಟ ಸಂಸ್ಥೆಗಳು ಸರಾಸರಿ ಅಂತಾರಾಷ್ಟ್ರೀಯ ತೈಲ ದರವನ್ನು ಆಧರಿಸಿ ಪ್ರತಿ ತಿಂಗಳ 1ನೇ ಹಾಗೂ 16ನೇ ತಾರೀಖುಗಳಲ್ಲಿ ಪೆಟ್ರೋಲ್ ದರವನ್ನು ಪರಿಷ್ಕರಿಸುತ್ತವೆ.''ತೈಲ ದರಗಳಲ್ಲಿ ದಿನಂಪ್ರತಿ ಬದಲಾವಣೆಗಳನ್ನು ಮಾಡುವುದು ತಾಂತ್ರಿಕವಾಗಿ ಸಾಧ್ಯವಿದೆ. ಆದರೆ ಅದಕ್ಕೂ ಮೊದಲು ಅದನ್ನು ಪೈಲಟ್ ಯೋಜನೆಯ ರೂಪದಲ್ಲಿ ಜಾರಿಗೊಳಿಸಬೇಕಿದೆ. ಆಗ ಅದರ ಪರಿಣಾಮಗಳನ್ನು ಅಧ್ಯಯನ ನಡೆಸಬಹುದಾಗಿದೆ. ಆನಂತರ ಈ ವ್ಯವಸ್ಥೆಯನ್ನು ದೇಶದ ಇತರ ಭಾಗಗಳಿಗೂ ವಿಸ್ತರಿಸಬಹುದಾಗಿದೆ '' ಎಂದು ಧರ್ಮೇಂದ್ರ ಪ್ರಧಾನ್ ತಿಳಿಸಿದರು.

ಪೆಟ್ರೋಲ್ ದರಗಳನ್ನು ಕೇಂದ್ರ ಸರಕಾರದ ನಿಯಂತ್ರಣದಿಂದ ಜೂನ್ 2010ರಲ್ಲಿ ಮುಕ್ತಗೊಳಿಸಲಾಗಿದ್ದರೆ, 2014ರ ಅಕ್ಟೋಬರ್‌ನಲ್ಲಿ ಡೀಸೆಲ್ ದರಗಳನ್ನು ಅನಿಯಮಿತಗೊಳಿಸಲಾಗಿತ್ತು.

ಪೆಟ್ರೋಲ್ ದರ ಡೀಸೆಲ್ ದರಗಳನ್ನು ಎಪ್ರಿಲ್ 1ರಂದು ಕೊನೆಯ ಬಾರಿಗೆ ಪರಿಷ್ಕರಿಸಲಾಗಿದ್ದು, ಕ್ರಮವಾಗಿ ಲೀಟರ್‌ಗೆ 3.77 ರೂ. ಹಾಗೂ ಡೀಸೆಲ್ ದರವನ್ನು 2.91 ರೂ. ಇಳಿಕೆ ಮಾಡಲಾಗಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X