ದ.ಕ.ಜಿಲ್ಲಾ ದಾರಿಮೀಸ್ ನೂತನ ಪದಾಧಿಕಾರಿಗಳ ಆಯ್ಕೆ
ಮಂಗಳೂರು,ಎ.12: ದ.ಕ.ಜಿಲ್ಲಾ ದಾರಿಮೀಸ್ ಅಸೋಸಿಯೇಶನ್ ಮಹಾಸಭೆಯು ಇತ್ತೀಚೆಗೆ ಮಾರಿಪಳ್ಳ ಮದ್ರಸದಲ್ಲಿ ಆದಮ್ ದಾರಿಮಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ದಾರಿಮೀಸ್ ರಾಜ್ಯಾಧ್ಯಕ್ಷ ಎಸ್.ಬಿ.ಮುಹಮ್ಮದ್ ದಾರಿಮಿ ಸಭೆಯನ್ನು ಉದ್ಘಾಟಿಸಿದರು.ಹುಸೈನ್ ದಾರಿಮಿ ರೆಂಜಲಾಡಿ, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಮಾತನಾಡಿದರು.
ಸಭೆಯಲ್ಲಿ ದ.ಕ.ಜಿಲ್ಲಾ ದಾರಿಮೀಸ್‌ನ ನೂತನ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಮಾಹಿನ್ ದಾರಿಮಿ ಪಾತೂರು, ಅಧ್ಯಕ್ಷರಾಗಿ ಕೆ.ಬಿ.ಅಬ್ದುಲ್ ಖಾದಿರ್ ದಾರಿಮಿ ಕೊಡುಂಗಾಯಿ, ಉಪಾಧ್ಯಕ್ಷರಾಗಿ ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ, ಎಸ್.ಐ.ಹನೀಫ್ ದಾರಿಮಿ ಸವಣೂರು,ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಮಜೀದ್ ದಾರಿಮಿ ಕುಂಬ್ರ, ವರ್ಕಿಂಗ್ ಕಾರ್ಯಾದರ್ಶಿಯಾಗಿ ಫಾರೂಕ್ ದಾರಿಮಿ ಗ್ರಾಮಚಾವಡಿ, ಜೊತೆ ಕಾರ್ಯದರ್ಶಿಯಾಗಿ ಇಮ್ರಾನ್ ದಾರಿಮಿ ದೇರಳಕಟ್ಟೆ, ಹನೀಫ್ ದಾರಿಮಿ ನೆಕ್ಕಿಲಾಡಿ, ಕೋಶಾಧಿಕಾರಿಯಾಗಿ ಅಬ್ದುಲ್ ಕರೀಂ ದಾರಿಮಿ ಸಂಪ್ಯ ಕೋಶಾಧಿಕಾರಿ, ಪತ್ರಿಕಾ ಕಾರ್ಯದರ್ಶಿಯಾಗಿ ಅಬ್ದುಲ್ ಮಜೀದ್ ದಾರಿಮಿ ಪಳ್ಳಿಪ್ಪಾಡಿ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆದಂ ದಾರಿಮಿ ಅಜ್ಜಿಕಟ್ಟೆ, ಅಹ್ಮದ್ ದಾರಿಮಿ, ಬಶೀರ್ ದಾರಿಮಿ, ಖಾಸಿಂ ದಾರಿಮಿ ಸವಣೂರು, ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ಅಬ್ದುಲ್ಲತೀಫ್ ದಾರಿಮಿ ರೆಂಜಾಡಿ, ಶರೀಫ್ ದಾರಿಮಿ ಮಾರಿಪಳ್ಳ, ಖಲೀಲುರ್ರಹ್ಮಾನ್ ದಾರಿಮಿ ಮಾರಿಪಳ್ಳ, ಅಬ್ದುಲ್ ಹಮೀದ್ ದಾರಿಮಿ ಅಳಿಕೆ, ಜಮಾಲುದ್ದೀನ್ ದಾರಿಮಿ ಗಡಿಯಾರ, ಅಬ್ದುಲ್ ಹಮೀದ್ ದಾರಿಮಿ ಅಗ್ರಹಾರ, ನುಹ್ಮಾನ್ ದಾರಿಮಿ ಬಂಟ್ವಾಳ, ಹುಸೈನ್ ದಾರಿಮಿ ಸುರಿಬೈಲು ಆಯ್ಕೆಯಾದರು.





