ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರೊ.ಪ್ರವೀಣ್‌ಗೆ ಡಾಕ್ಟರೇಟ್ ಪದವಿ

ಮೂಡುಬಿದಿರೆ, ಎ.12: ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಶೈಕ್ಷಣಿಕ ವಿಭಾಗದ ಡೀನ್ ಪ್ರೊ.ಪ್ರವೀಣ್ ಜೆ. ಮಂಡಿಸಿದ ಎಲೆಕ್ಟ್ರಾನಿಕ್ಸ್ ವಿಷಯಾಧಾರಿತ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
'ಬಿಸ್ಟ್ ಬೇಸ್ಡ್ ಲೋ ಪವರ್ ಟ್ರಾನ್ಸಿಷನ್ ಟೆಸ್ಟ್ ಪ್ಯಾಟ್ರನ್ ಜನರೇಷನ್ ಫಾರ್ ಮಿನಿಮೈಸಿಂಗ್ ಟೆಸ್ಟ್ ಪವರ್ ಇನ್ ವೆರಿಲಾರ್ಜ್ ಸ್ಕೇಲ್ ಇಂಟಿಗ್ರೇಷನ್ ಸರ್ಕ್ಯೂಟ್" ಎಂಬ ವಿಷಯದ ಕುರಿತು ಪ್ರವೀಣ್ ಪ್ರಬಂಧ ಮಂಡಿಸಿದ್ದರು. ಪ್ರವೀಣ್ ಅವರು ಮೈಸೂರಿನ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರಾಧ್ಯಾಪಕ, ಮುಖ್ಯಸ್ಥ ಡಾ.ಷಣ್ಮುಖ ಸ್ವಾಮಿ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು.
Next Story





