ಶಿಕ್ಷಣವೆಂಬುದು ನಿರಂತರವಾದ ಪ್ರಕ್ರಿಯೆ: ಎನ್.ಸಂತೋಷ್ ಹೆಗ್ಡೆ
ದೇರಳಕಟ್ಟೆಯಲ್ಲಿ ನಿಟ್ಟೆ ವಾಕ್‌ಶ್ರವಣ ವಿಭಾಗದ ಪದವಿ ಪ್ರದಾನ ಸಮಾರಂಭ

ಕೊಣಾಜೆ, ಎ.12: ಶಿಕ್ಷಣ ಎಂದಿಗೂ ನಿಂತ ನೀರಲ್ಲ, ಅದೊಂದು ನಿರಂತರ ಪ್ರಕ್ರಿಯೆ. ಪದವಿ ಎಂಬುದು ಒಂದು ಹಂತದ ಕಲಿಕೆಯಷ್ಟೇ, ಬಳಿಕವೂ ಸಿಗುವ ಮಾಹಿತಿಯನ್ನು ಸಂಗ್ರಹಿಸಿದಾಗ ಜ್ಞಾನವೃದ್ಧಿಯಾಗಿ ವೃತ್ತಿ ಜೀವನದಲ್ಲಿ ಅನುಕೂಲವಾಗುತ್ತದೆ ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದರು.
ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡಮಿ ಸಭಾಂಗಣದಲ್ಲಿ ಬುಧವಾರ ನಿಟ್ಟೆ ವಿಶ್ವವಿದ್ಯಾಲಯದ ವಾಕ್‌ಶ್ರವಣ ವಿಭಾಗ ಪದವೀಧರರಿಗೆ 7ನೆ ವರ್ಷದ ಪದವಿ ಪ್ರದಾನ ಮಾಡಿ ಅವರು ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಡಾ.ಎಂ.ಶಾಂತರಾಮ್ ಶೆಟ್ಟಿ ಮಾತನಾಡಿ
ಕಾರ್ಯಕ್ರಮದಲ್ಲಿ ವಾಕ್‌ಶ್ರವಣ ವಿಭಾಗದ ಹತ್ತು ವರ್ಷಗಳ ಸಾಧನೆಯ ಪ್ರಥಮ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. 30 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಪ್ರಾಂಶುಪಾಲೆ ಡಾ.ಉಷಾ ಶಾಸ್ತ್ರಿ ಉಪಸ್ಥಿತರಿದ್ದರು. ವಿಭಾಗ ನಿರ್ದೇಶಕ ಪ್ರೊ.ಟಿ.ದತ್ತಾತ್ರೇಯ ಸ್ವಾಗತಿಸಿದರು. ಮಾಯಾ ವರ್ಮ ವಂದಿಸಿದರು. ಶಿಲ್ಪಾ ಎನ್.ಪಿ. ಕಾರ್ಯಕ್ರಮ ನಿರ್ವಹಿಸಿದರು.





