ಅಕ್ರಮ ವಾಸ್ತವ್ಯ ಪ್ರಕರಣ: ಉಗಾಂಡ ಪ್ರಜೆ ವಿರುದ್ಧದ ಎಫ್‌ಐಆರ್ ರದ್ದು
ಬೆಂಗಳೂರು,ಎ.12: ಪಾಸ್‌ಪೋರ್ಟ್ ಅವಧಿ ಮುಗಿದ ಬಳಿಕವೂ ರಾಜ್ಯದಲ್ಲಿ ಅಕ್ರಮ ವಾಸ್ತವ್ಯ ಹೂಡಿದ್ದ ಆರೋಪದಡಿಯಲ್ಲಿ ಉಗಾಂಡ ಪ್ರಜೆ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಈ ಸಂಬಂಧ ಜುನಿಯಾ ಮೆಯೆಂಬ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ್ ಭೈರಾರೆಡ್ಡಿ ಅವರಿದ್ದ ಪೀಠ ಈ ಆದೇಶ ನೀಡಿತು.
ಅರ್ಜಿದಾರರ ಪರ ವಾದಿಸಿದ ವಕೀಲ ಎಲ್.ಶ್ರೀನಿವಾಸಬಾಬು ಅವರು, ತಮ್ಮ ಕಕ್ಷಿದಾರ ಜುನಿಯಾ ಮೆಯೆಂಬ್ ಅವರು ಎ.30ರಂದು ಸ್ವದೇಶಕ್ಕೆ ತೆರಳಲು ವಿಮಾನದ ಟಿಕೆಟ್‌ನ್ನು ಕಾಯ್ದಿರಿಸಿದ್ದಾರೆ. ಹೀಗಾಗಿ, ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನ್ನು ರದ್ದುಪಡಿಸಬೇಕೆಂದು ಪೀಠಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಪೀಠವು ಜುನಿಯಾ ಮೆಯೆಂಬ್ ಅವರ ಮೇಲೆ ದಾಖಲಾಗಿದ್ದ ಎಫ್‌ಐಆರ್‌ನ್ನು ರದ್ದುಗೊಳಿಸಿಬೇಕೆಂದು ಆದೇಶಿಸಿತು.
Next Story





