ದಾವಣಗೆರೆ: ಚಿನ್ನದ ಸರ ಕಿತ್ತು ಪರಾರಿ
ದಾವಣಗೆರೆ, ಎ.12: ವ್ಯಾಪಾರ ಮಾಡುವ ಸೋಗಿನಲ್ಲಿ ಬಂದ ಇಬ್ಬರು ಅಂಗಡಿಯಲ್ಲಿನ ಮಹಿಳೆ ಕೊರಳಲ್ಲಿದ್ದ ಚಿನ್ನದ ಸರ ಕಿತ್ತು ಪರಾರಿಯಾದ ಘಟನೆ ನಡೆದಿದೆ.
ಸ್ಥಳೀಯ ಆಂಜನೇಯ ಬಡಾವಣೆ ಯಲ್ಲಿರುವ ಭಾಗ್ಯಮ್ಮ(50) ಎಂಬವರ ಅಂಗಡಿಗೆ ಇಬ್ಬರು ವ್ಯಕ್ತಿಗಳು ಬೈಕ್‌ನಲ್ಲಿ ಬಂದು ಸಿಗರೇಟು, ಉಪ್ಪಿನ ಪಾಕೆಟ್ ಖರೀದಿ ಮಾಡುವ ನೆಪದಲ್ಲಿ ಆಕೆಯ ಕೊರಳಲ್ಲಿದ್ದ ಸುಮಾರು 38 ಸಾವಿರ ರೂ.ಮೌಲ್ಯದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





