ಆರ್ಟ್ ಆಫ್ ಲಿವಿಂಗ್ ‘ಉತ್ಸವ’ದಿಂದ ಯಮುನಾ ದಂಡೆಗೆ ಭಾರೀ ಹಾನಿ
ಹಸಿರು ನ್ಯಾಯಾಧೀಕರಣಕ್ಕೆ ತಜ್ಞರ ಸಮಿತಿ ವರದಿ
ಹೊಸದಿಲ್ಲಿ,ಎ.12: ಶ್ರೀರವಿಶಂಕರ್ ಅವರ ಆರ್ಟ್ ಆಫ್ ಲಿವಿಂಗ್ ಕಳೆದ ವರ್ಷದ ಮಾರ್ಚ್‌ನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಉತ್ಸವದಿಂದಾಗಿ ‘‘ನಾಶಗೊಂಡಿರುವ’’ ಯಮುನಾ ನದಿದಂಡೆ ಪ್ರದೇಶದ ಪುನರ್ವಸತಿಗೆ ಹತ್ತು ವರ್ಷಗಳೇ ಬೇಕಾಗಬಹುದು ಹಾಗೂ 13.29 ಕೋಟಿ ರೂ. ವೆಚ್ಚ ತಗಲಲಿದೆಯೆಂದು ತಜ್ಞರ ಸಮಿತಿಯೊಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ ತಿಳಿಸಿದೆ.
ಹಾನಿಗೀಡಾಗಿರುವ ಯಮುನಾ ನದಿದಂಡೆ ಪ್ರದೇಶವನ್ನು ಯಥಾಸ್ಥಿತಿಗೆ ತರಲು ಬೃಹತ್ ಮಟ್ಟದ ಕಾಮಗಾರಿ ನಡೆಯಬೇಕಾಗಿದೆಯೆಂದು ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಶಶಿ ಶೇಖರ್ ನೇತೃತ್ವದ ತಜ್ಞರ ಸಮಿತಿ ತಿಳಿಸಿದೆ.
ಆರ್ಟ್ ಆಫ್ ಲಿವಿಂಗ್‌ನ ಸಾಂಸ್ಕೃತಿಕ ಉತ್ಸವದಿಂದಾಗಿ ಯುಮನಾ ನದಿಯ ಪಶ್ಚಿಮ ಬಯಲುದಂಡೆಯ 120 ಎಕರೆ ಹಾಗೂ ಪೂರ್ವ ಎಡದಂಡೆಯ 50 ಹೆಕ್ಟೇರ್ ಪ್ರದೇಶದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮವುಂಟಾಗಿದೆಯೆಂದು ಸಮಿತಿ ತಿಳಿಸಿದೆ.
Next Story