ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಹರ್ಯಾಣ ಸರಕಾರದಿಂದ “ಆಪರೇಷನ್ ದುರ್ಗಾ” ಸ್ಕ್ವಾಡ್

ಚಂಡೀಗಢ, ಎ.13: ಮಹಿಳೆಯರ ಮೇಲಿನ ಅಪರಾಧ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಹರ್ಯಾಣ ಸರಕಾರವು “ಆಪರೇಷನ್ ದುರ್ಗಾ” ಎಂಬ ತಂಡವೊಂದನ್ನು ರಚಿಸಿದ್ದು, ಇದರಡಿಯಲ್ಲಿ ಕಾರ್ಯ ನಿರ್ವಹಿಸುವ ಪೊಲೀಸರು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ 72 ಮಂದಿಯನ್ನು ಮೊದಲ ದಿನವೇ ಬಂಧಿಸಿದ್ದಾರೆ.
“ಆಪರೇಷನ್ ದುರ್ಗಾ”ದ 24 ತಂಡಗಳನ್ನು ರಚಿಸಲಾಗಿದ್ದು, ಹರ್ಯಾಣದ ಎಲ್ಲಾ ಜಿಲ್ಲೆಗಳನ್ನು ಕಾರ್ಯಾಚರಣೆ ನಡೆಸಿದ ತಂಡಗಳು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದವರನ್ನು ಬಂಧಿಸಿದೆ ಎಂದು ಸರಕಾರಿ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.
ತಂಡದಲ್ಲಿ ಮಹಿಳಾ ಅಧಿಕಾರಿಗಳು ಸೇರಿದಂತೆ 9 ಸಬ್ ಇನ್ಸ್ ಪೆಕ್ಟರ್ ಗಳಿದ್ದು, 14 ಅಸಿಸ್ಟಂಟ್ ಸಬ್ ಇನ್ಸ್ ಪೆಕ್ಟರ್ ಗಳು, 6 ಹೆಡ್ ಕಾನ್ ಸ್ಟೇಬಲ್ ಹಾಗೂ 13 ಕಾನ್ ಸ್ಟೇಬಲ್ ಗಳಿದ್ದಾರೆ. ಶಾಲೆಗಳು, ಕಾಲೇಜುಗಳು, ಬಸ್ ಹಾಗೂ ರೈಲ್ವೆ ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಿಗೆ ಪೊಲೀಸರು ದಾಳಿ ನಡೆಸಿದ್ದು, ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
Next Story