ನಂಜನಗೂಡಿನಲ್ಲಿ ಕಳಲೆ ಕೇಶವ ಮೂರ್ತಿಗೆ ಗೆಲುವು

ಮೈಸೂರು, ಎ.13: ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನ ಅಭ್ಯರ್ಥಿ ಕಳಲೆ ಎನ್.ಕೇಶವ ಮೂರ್ತಿ ಭರ್ಜರಿ ಜಯ ಗಳಿಸಿದ್ದಾರೆ.
ಮಾಜಿ ಸಚಿವ ಹಾಗೂ ಬಿಜೆಪಿಯ ಶ್ರೀನಿವಾಸ್ ಪ್ರಸಾದ್ ವಿರುದ್ಧ 21, 334 ಮತಗಳ ಅಂತರದಿಂದ ಜಯ ಗಳಿಸಿದ ಕಳಲೆ ಎನ್ ಕೇಶವ ಮೂರ್ತಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ.
ಕಳಲೆ ಕೇಶವ ಮೂರ್ತಿ 86,212, ಬಿಜೆಪಿಯ ಶ್ರೀನಿವಾಸ್ ಪ್ರಸಾದ್ 64, 878 ಮತಗಳನ್ನು ಪಡೆದಿದ್ದಾರೆ.
Next Story





