Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಬೆಳಕುಗಳ ಮಾಲೆಯಲ್ಲಿ ಕಂಗೊಳಿಸುತ್ತಿರುವ...

ಬೆಳಕುಗಳ ಮಾಲೆಯಲ್ಲಿ ಕಂಗೊಳಿಸುತ್ತಿರುವ ಭಾರತ

ನಾಸಾ ಬಿಡುಗಡೆಗೊಳಿಸಿದೆ ಭೂಮಿಯ ರಾತ್ರಿ ಹೊತ್ತಿನ ಚಿತ್ರಗಳು

ವಾರ್ತಾಭಾರತಿವಾರ್ತಾಭಾರತಿ13 April 2017 1:19 PM IST
share
ಬೆಳಕುಗಳ ಮಾಲೆಯಲ್ಲಿ ಕಂಗೊಳಿಸುತ್ತಿರುವ ಭಾರತ

ವಾಷಿಂಗ್ಟನ್, ಎ.13: ರಾತ್ರಿಯ ಹೊತ್ತು ಭೂಮಿ, ಮುಖ್ಯವಾಗಿ ಭಾರತ ಬಾಹ್ಯಾಕಾಶದಿಂದ ಹೇಗೆ ಕಾಣಿಸುತ್ತದೆಯೆಂದು ನೋಡುವ ಕುತೂಹಲವಿದೆಯೇ?, ಹಾಗಾದರೆ 2012ರ ನಂತರ ಪ್ರಥಮ ಬಾರಿಗೆ ನಾಸಾ ಭೂಮಿಯ ಅದ್ಭುತ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಈ ಸ್ಯಾಟಲೈಟ್ ಚಿತ್ರಗಳು ಮನಮೋಹಕವಾಗಿದ್ದು, ಭೂಮಿ ಸ್ವರ್ಗದಂತೆ ‘‘ರಾತ್ರಿಯ ಬೆಳಕುಗಳಲ್ಲಿ’’ ಕಂಗೊಳಿಸುತ್ತಿದೆ.

ಇಂತಹ ಚಿತ್ರಗಳನ್ನು ನಾಸಾ ಕೆಲವು ವರ್ಷಗಳ ಅಂತರದಲ್ಲಿ 25 ವರ್ಷಗಳಿಂದ ಬಿಡುಗಡೆಗೊಳಿಸುತ್ತಿದ್ದರೂ ಇನ್ನು ಮುಂದೆ ನಿಯಮಿತವಾಗಿ ಇಂತಹ ಚಿತ್ರಗಳನ್ನು ಬಿಡುಗಡೆ ಮಾಡುವ ಬಗ್ಗೆ ಯೋಚಿಸುತ್ತಿದೆ. ಹವಾಮಾನ ವರದಿಗಳ ವಿಧಾನವನ್ನೇ ಬದಲಾಯಿಸಬಲ್ಲ, ಪ್ರಾಕೃತಿಕ ವಿಕೋಪಗಳುಂಟಾದಾಗ ನಡೆಸಲಾಗುವ ಪರಿಹಾರ ಕಾರ್ಯಾಚರಣೆ ಮತ್ತು ಯುದ್ಧದ ಪರಿಣಾಮಗಳನ್ನು ಅರಿಯಲು ಇಂತಹ ಚಿತ್ರಗಳು ಸಹಕಾರಿ ಎನ್ನಲಾಗಿದೆ.

ದೇಶವೊಂದು ಕೆಲವು ವರ್ಷಗಳ ಅಂತರದಲ್ಲಿ ಎಷ್ಟು ಬೆಳೆದಿದೆಯೆಂಬುದೂ ಇಂತಹ ಚಿತ್ರಗಳಿಂದ ಅರಿಯಬಹುದಾಗಿದ್ದು. ಇಲ್ಲಿ ನೀಡಲಾಗಿರುವ ಭಾರತದ ಎರಡು ಚಿತ್ರಗಳಲ್ಲಿನ ಬೆಳಕುಗಳ ಆಧಾರದಲ್ಲಿ ಬದಲಾವಣೆ ಗೋಚರಿಸುತ್ತಿದೆ. ಒಂದು ಚಿತ್ರ 2012ರಲ್ಲಿ ನಾಸಾ ತೆಗೆದಿದ್ದರೆ, ಇನ್ನೊಂದು 2016ರ ಚಿತ್ರವಾಗಿದೆ. ನಾಸಾದ ಗೊಡ್ಡರ್ಡ್ ಸ್ಪೇಸ್ ಫ್ಲೈಟ್ ಸೆಂಟರ್ ಇಲ್ಲಿನ ಭೂವಿಜ್ಞಾನಿ ಮಿಗುವೆಲ್ ರೋಮನ್ ಅವರ ನೇತೃತ್ವದಲ್ಲಿ ಭೂಮಿಯ ಅತ್ಯಂತ ಸ್ಪಷ್ಟ ಚಿತ್ರಗಳನ್ನು ನೀಡಲು ಹೊಸ ಸಾಫ್ಟ್ ವೇರ್ ಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಈ ವರ್ಷ ನಾಸಾ ಬಿಡುಗಡೆಗೊಳಿಸಿದ ಭೂಮಿಯ ಚಿತ್ರಗಳಲ್ಲಿ ಚಂದ್ರನ ಬೆಳಕಿನ ರಹಿತ ಭೂಮಿಯ ಚಿತ್ರಣ ನೀಡಲಾಗಿದೆ.

ನಾಸಾ-ನೋವಾ ಸುವೋಮಿ ನ್ಯಾಷನಲ್ ಪೋಲಾರ್ ಆರ್ಬಿಟಿಂಗ್ ಪಾರ್ಟ್ನರ್ ಶಿಪ್ ಸ್ಯಾಟಿಲೈಟಿನ ಮೇಲಿರುವ ವಿಸಿಬಲ್ ಇನ್‌ಫ್ರಾರೆಡ್ ಇಮೇಜಿಂಗ್ ರೇಡಿಯೋಮೀಟರ್ ಸೂಟ್ ಮುಖಾಂತರ ಇದು ಸಾಧ್ಯವಾಗಿದೆ. ಭೂಮಿಯ ಮೇಲ್ಪದರದಲ್ಲಿರುವ ದೀಪದ ಬೆಳಕುಗಳ ಪ್ರಖರತೆ, ವಿವಿಧತೆಗಳ ಮೇಲೆ ಬೆಳಕು ಚೆಲ್ಲಬಲ್ಲ ಸಾಮರ್ಥ್ಯ ಈ ಸಾಧನಕ್ಕಿದೆಯೆನ್ನಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X