ನನ್ನನ್ನು ತಡೆಯಲು ನೀವ್ಯಾರು: ಸಂಘಪರಿವಾರಕ್ಕೆ ಮಮತಾ ಬ್ಯಾನರ್ಜಿ
ಕೊಲ್ಕತ್ತ, ಎ. 12: ತಾನುದುರ್ಗಾಪೂಜೆಯಲ್ಲಿ ಭಾಗವಹಿಸುವೆ, ಈದ್ ನಲ್ಲಿಯೂ ಭಾಗವಹಿಸುವೆ, ಚರ್ಚ್‌ಗೂ ಹೋಗುವೆ ಯಾರಿಗಾದರೂ ತನ್ನನ್ನು ತಡೆಯಲು ಸಾಧ್ಯವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ. ಬಿಜೆಪಿ ನಾಯಕ ಯೋಗೇಶ್ ವರ್ಷ್ಣೆನೀಡಿದ್ದ ವಿವಾದಾತ್ಮ ಕ ಹೇಳಿಕೆಗೆ ಅವರು ಈ ರೀತಿ ತೀಕ್ಷ್ಣ ಉತ್ತರ ನೀಡಿದ್ದಾರೆ.
ನನ್ನ ವಿರುದ್ದ ನಿರಂತರ ಕೆಟ್ಟದಾಗಿ ಸಂಘಪರಿವಾರಿಗಳು ಮಾತಾಡುತ್ತಿದ್ದಾರೆ. ಇಂತಹಕೆಟ್ಟ ಹೇಳಿಕೆಗಳನ್ನು ನೀಡಿದಷ್ಟೂ ತಾನು ಇನ್ನಷ್ಟು ಶಕ್ತಳಾಗುವೆ ಎಂದು ಮಮತಾ ಮುರ್ಷಿದಾಬಾದ್‌ನಲ್ಲಿ ನಡೆದ ಒಂದು ಸಾರ್ವಜನಿಕ ರ್ಯಾಲಿಯಲ್ಲಿ ಸಂಘಪರಿವಾರಿಗಳಿಗೆ ಉತ್ತರ ನೀಡಿದರು. ನೀವು ಎಷ್ಟು ಬೇಕಾದರೂ ಅಪಮಾನಿಸಿರಿ. ಅವೆಲ್ಲವನ್ನು ಮರೆಯುವ ಶಕ್ತಿ ಕೊಡು ಎಂದು ನಾನು ದೇವನಲ್ಲಿ ಪ್ರಾರ್ಥಿಸುತ್ತೇನೆ ಎಂದ ಮಮತಾ, ಅವರಿಗೆ ಅವರು ಏನು ಹೇಳುತ್ತಿದ್ದಾರೆಂದೇ ಗೊತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಕಳೆದ ದಿವಸ ಬಿಜೆಪಿ ಯುವ ಮೋರ್ಚಾ ನಾಯಕ ಯೋಗೇಶ್ ವರ್ಷ್ಣೆ ಹನುಮಾನ್ ಜಯಂತಿ ಆಚರಣೆ ವೇಳೆ ಬಿರ್‌ಭೂಮಿಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾರ ತಲೆ ಕಡಿದು ತಂದವರಿಗೆ 11 ಲಕ್ಷ ರೂಪಾಯಿ ಬಹುಮಾನ ಕೊಡುವೆ ಎಂದಿದ್ದನು. ಆತನ ಉಗ್ರ ಹೇಳಿಕೆಗೆ ಮಮತಾ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.