ಬಹುಭಾಷಾ ಗಾಯಕ ಕೈಲಾಶ್ ಖೇರ್ ಗೆ “ಪದ್ಮಶ್ರೀ ಪ್ರಶಸ್ತಿ” ಪ್ರದಾನ

ಹೊಸದಿಲ್ಲಿ, ಎ.13: ಖ್ಯಾತ ಬಹುಭಾಷಾ ಗಾಯಕ ಕೈಲಾಶ್ ಖೇರ್ ಅವರು ಸಂಗೀತ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ “ಪದ್ಮಶ್ರೀ ಪ್ರಶಸ್ತಿ” ಪ್ರದಾನಿಸಿ ಗೌರವಿಸಲಾಯಿತು. ರಾಷ್ಟ್ರಪತಿ ಪ್ರಣವ್ ಮುಖರ್ಜಿ “ಅಲ್ಲಾ ಕೆ ಬಂದೆ ಅಪ್ನೆ” ಗಾಯಕ ಖೈಲಾಶ್ ರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನಿಸಿದರು.
ಇದಕ್ಕೂ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದ ಖೈಲಾಶ್, "ಪದ್ಮಶ್ರೀಯಂತಹ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದಕ್ಕೆ ಅತೀವ ಸಂತಸವಾಗಿದೆ. ಈ ಸಂಭ್ರಮವನ್ನು ವಿವರಿಸಲು ಪದಗಳೇ ಸಾಕಾಗುತ್ತಿಲ್ಲ. ನನ್ನ ಪಾಲಿಗೆ ಇದೊಂದು ಐತಿಹಾಸಿಕ ಕ್ಷಣವಾಗಿದೆ” ಎಂದರು.
ಮೀರತ್ ನವರಾದ ಕೈಲಾಶ್ ಖೇರ್ ತಮ್ಮ ಶಿಕ್ಷಣವನ್ನು ನಿಲ್ಲಿಸಿ, ತಮ್ಮ ಕನಸಾದ ಸಂಗೀತದೆಡೆಗೆ ಗಮನಹರಿಸಿದ್ದರು. ಹಾಡುಗಳಿಗೆ ಸೂಫಿ ಶೈಲಿಯನ್ನು ಬೆರೆಸಿ ಪ್ರಖ್ಯಾತರಾಗಿದ್ದ ಖೈಲಾಶ್, “ತೇರಿ ದಿವಾನಿ”, ಯಾ ರಬ್ಬಾ” ಮೊದಲಾದ ಹಾಡುಗಳಿಂದ ಪ್ರಸಿದ್ಧರಾಗಿದ್ದರು.
Next Story





