ಕೆಲಸದಲ್ಲಿ ತೃಪ್ತಿ ಇರಬೇಕೇ ಹೊರತು ದುರಾಸೆ ಇರಬಾರದು: ಸಂತೋಷ್ ಹೆಗ್ಡೆ

ಹಾಸನ, ಎ.13: ಕೆಲಸದಲ್ಲಿ ಮನುಷ್ಯನಿಗೆ ತೃಪ್ತಿ ಇರಬೇಕೇ ಹೊರತು ದುರಾಸೆ ಇರಬಾರದು ಎಂದು ಸುಪ್ರಿಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.
ತಾಲೂಕಿನ ಕೆಂಚಟ್ಟಹಳ್ಳಿ ಬಳಿ ಇರುವ ಎಚ್‌ಕೆಎಸ್ ಶಿಕ್ಷಣ ಶಿಕ್ಷಣ ಸಮೂಹ ಮತ್ತು ದೀಕ್ಷಾ ಜಂಟಿಯಾಗಿ ನಿರ್ಮಿಸಿರುವ ನೂತನ ಪಿಯು ಬ್ಲಾಕ್‌ನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆಲ ವರ್ಷಗಳ ಹಿಂದೆ ನಡೆಸಲ್ಪಟ್ಟ 2ಜಿ ಹಗರಣ, ಕಾಮನ್ ವೆಲ್ತ್ ಹಗರಣ, ಕಲ್ಲಿದ್ದಲು ಹಗರಣ ಇತರೆ ಅನೇಕ ಹಗರಣದ ಮೂಲಕ ಕೆಲ ವ್ಯಕ್ತಿಗಳು ಸಾವಿರಾರು ಕೋಟಿ ರೂ.ಗಳನ್ನು ಲೂಟಿ ಮಾಡಿದರು. ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡಿ ಮುಂದೆ ಸಾಗಬೇಕು. ಆದರೆ ದುಡಿಯದ ಹಣಕ್ಕೆ ಆಸೆ ಪಡಬಾರದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಎಚ್‌ಕೆಎಸ್ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಸಾಕಮ್ಮ, ಕೆಂಪೇಗೌಡ, ಅಧ್ಯಕ್ಷೆ ಕೋಮಲ, ಕಾರ್ಯದರ್ಶಿ ಎಚ್.ಕೆ. ಸುರೇಶ್, ಟ್ರಸ್ಟಿಗಳಾದ ಟಿ.ಆರ್. ಚಂದ್ರು, ನಾಗರಾಜನ್, ಸಂಸ್ಥೆಯ ಸಲಹೆಗಾರರಾದ ರಾಜೇಶ್ ಶಣೈ, ಎನ್.ಎಸ್. ರಾಜು, ದೀಕ್ಷಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಶ್ರೀಧರ್, ಸದಸ್ಯರಾದ ಗೋಪಾಲಕೃಷ್ಣ ಹೆಬ್ಬಾರ್ ಇತರರು ಉಪಸ್ಥಿತರಿದ್ದರು.





