ಚೀನಾ ಕರೆನ್ಸಿಯಲ್ಲಿ ಹಸ್ತಕ್ಷೇಪ ನಡೆಸುತ್ತಿಲ್ಲ : ಟ್ರಂಪ್

ವಾಶಿಂಗ್ಟನ್, ಎ. 13: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಪ್ಪರಲಾಗ ಹಾಕಿದ್ದು, ವ್ಯಾಪಾರ ಲಾಭ ಪಡೆದುಕೊಳ್ಳುವುದಕ್ಕಾಗಿ ಚೀನಾ ತನ್ನ ಕರೆನ್ಸಿಯಲ್ಲಿ ಹಸ್ತಕ್ಷೇಪ ನಡೆಸುತ್ತಿಲ್ಲ ಎಂದು ಹೇಳಿದ್ದಾರೆ.
'ವಾಲ್ ಸ್ಟ್ರೀಟ್ ಜರ್ನಲ್' ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ, ಚೀನಾ ಮತ್ತು ಅಮೆರಿಕಗಳ ನಡುವಿನ ವಿವಾದಾತ್ಮಕ ವಿಷಯವೊಂದಕ್ಕೆ ಪೂರ್ಣವಿರಾಮ ಹಾಕಲು ಮುಂದಾಗಿರುವಂತೆ ಟ್ರಂಪ್ ಗೋಚರಿಸಿದ್ದಾರೆ.
ಅಮೆರಿಕದ ಫ್ಲೋರಿಡದಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ ಕಳೆದ ವಾರ ಮಾತುಕತೆ ನಡೆಸಿದ ಬಳಿಕ ಅಮೆರಿಕ ಅಧ್ಯಕ್ಷರ ನಿಲುವಿನಲ್ಲಿ ಈ ಬದಲಾವಣೆ ಕಂಡುಬಂದಿದೆ.
ಚೀನಾವನ್ನು ಕರೆನ್ಸಿಯಲ್ಲಿ ಹಸ್ತಕ್ಷೇಪ ಮಾಡುವ ದೇಶವಾಗಿ ಘೋಷಿಸುವುದಾಗಿ ಟ್ರಂಪ್ ಅಧಿಕಾರಕ್ಕೇರಿದ ಮೊದಲ ದಿನ ಪ್ರಕಟಿಸಿರುವುದನ್ನು ಸ್ಮರಿಸಬಹುದಾಗಿದೆ.
Next Story