ಮಹಿಳೆಯರ ರಕ್ಷಣೆಗಾಗಿ ಹರ್ಯಾಣದಲ್ಲಿ ಆರಂಭಗೊಂಡಿದೆ ‘ಆಪರೇಷನ್ ದುರ್ಗಾ’
ಚಂಡಿಗಡ,ಎ.13: ಹರ್ಯಾಣ ಸರಕಾರವು ಮಹಿಳೆಯರ ರಕ್ಷಣೆಗಾಗಿ ಉ.ಪ್ರದೇಶದ ರೋಮಿಯೊ ನಿಗ್ರಹ ದಳದ ಮಾದರಿಯಲ್ಲಿ ‘ಆಪರೇಷನ್ ದುರ್ಗಾ’ಕ್ಕೆ ಚಾಲನೆ ನೀಡಿದ್ದು, ಮೊದಲನೇ ದಿನವೇ ರಾಜ್ಯಾದ್ಯಂತ ಪೊಲೀಸ್ ತಂಡಗಳು 72 ಜನರನ್ನು ಬಂಧಿಸಿವೆ.
ಮುಖ್ಯಮಂತ್ರಿಗಳ ಫ್ಯೈಯಿಂಗ್ ಸ್ಕ್ವಾಡ್ ರಚಿಸಿರುವ 24 ಪೊಲೀಸ್ ತಂಡಗಳು ಮಹಿಳೆಯರ ವಿರುದ್ಧ ಅಪರಾಧಗಳಲ್ಲಿ ಭಾಗಿಯಾಗಿದ್ದವರನ್ನು ಬಂಧಿಸಿವೆ ಎಂದು ಅಧಿಕೃತ ವಕ್ತಾರರೋರ್ವರು ಇಲ್ಲಿ ತಿಳಿಸಿದರು.
ಮಹಿಳಾ ಸಿಬ್ಬಂದಿಗಳನ್ನೂ ಹೊಂದಿರುವ ಈ ತಂಡಗಳು ಶಾಲೆ-ಕಾಲೇಜುಗಳು, ಬಸ್ ಮತ್ತು ರೈಲ್ವೆ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಮಹಿಳೆಯರನ್ನು ಚುಡಾಯಿಸುತ್ತ ಕಿರಕುಳ ನೀಡುತ್ತಿದ್ದವರನ್ನು ಬಂಧಿಸಿವೆ ಎಂದರು.
ಮಹಿಳೆಯರ ಸುರಕ್ಷತೆಗಾಗಿ ಎಲ್ಲ ಜಿಲ್ಲೆಗಳಲ್ಲಿ ಮಹಿಳಾ ಪೊಲೀಸ ಠಾಣೆಗಳನ್ನು ಸ್ಥಾಪಿಸಲಾಗಿದೆ. ಆದರೂ ಇಂತಹ ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ದೂರುಗಳ್ನು ಸಲ್ಲಿಸಲು ಮಹಿಳೆಯರು ಹಿಂದೇಟು ಹೊಡೆಯುತ್ತಿದ್ದಾರೆ. ಹೀಗಾಗಿ ಮಹಿಳೆಯರಿಗೆ ಕಿರುಕುಳಗಳು ನಡೆಯುತ್ತಿರುವ ಸ್ಥಳಗಳನ್ನು ಗುರುತಿಸಿದ ಬಳಿಕ ಆಪರೇಷನ್ ದುರ್ಗಾ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು.