'ಟಿಪ್ಪುಸುಲ್ತಾನ್ ಅನುದಾನಿತ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ'

ಉಳ್ಳಾಲ, ಎ.13: ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನದ ಕೋಟೆಪುರದ ಟಿಪ್ಪುಸುಲ್ತಾನ್ ಅನುದಾನಿತ ಶಾಲೆಯಲ್ಲಿ ಗುರುವಾರ ಎಸೆಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಳ್ಳಾಲ ಸೈಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುರ್ರಶೀದ್ ಅವರು,ಎಲ್ಲರನ್ನೂ ಮರೆಯುವ ಇಂದಿನ ದಿನಗಳಲ್ಲಿ ಕಲಿತ ಸಂಸ್ಥೆ, ಕಲಿಸಿದ ಗುರುಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವ ಕಾರ್ಯ ವಿದ್ಯಾರ್ಥಿಗಳಿಂದ ನಡೆಯಬೇಕು ಎಂದು ತಿಳಿಸಿದರು.
ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಇಬ್ರಾಹೀಂ, ಜತೆ ಕಾರ್ಯದರ್ಶಿ ಎ.ಕೆ.ಮೊಯ್ದಿನ್, ಸೈಯದ್ ಮದನಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಬ್ದುಲ್ಲತೀಫ್, ಶಾಲೆಯ ಮುಖ್ಯ ಶಿಕ್ಷಕ ಎಂ.ಎಚ್.ಮಲಾರ್, ಪ್ರಭಾರ ಮುಖ್ಯ ಶಿಕ್ಷಕಿ ಗೀತಾ, ಕಲ್ಲಾಪು ಹಝ್ರತ್ ಸೈಯದ್ ಮದನಿ ಆಂಗ್ಲಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ನಸೀಮಾ, ಅಲೇಕಳ ಶಾಲೆಯ ಮುಖ್ಯ ಶಿಕ್ಷಕಿ ರಮ್ಲತ್ ಉಪಸ್ಥಿತರಿದ್ದರು.
Next Story





