ಆಲಿಂ ಕೋರ್ಸ್‌ಗೆ ದಾಖಲಾತಿ ಆರಂಭ

ಮಂಗಳೂರು, ಎ. 13: ಅಲ್ ಅಝ್ಹರಿಯಾ ಮದ್ರಸದಲ್ಲಿ ಆಲಿಂ ಕೋರ್ಸ್ (ತಫ್ಸೀರ್, ಹದೀಸ್, ಫಿಕ್ಹ್, ತಸವ್ವಫ್)ಗೆ ದಾಖಲಾತಿ ಪ್ರಾರಂಭಗೊಂಡಿದೆ. ಎಸೆಸೆಲ್ಸಿ ಪಾಸಾದ ಆಸಕ್ತ ವಿದ್ಯಾರ್ಥಿಗಳಿಗೆ ಪಿಯುಸಿ ಮತ್ತು ಡಿಗ್ರಿ ಕೋರ್ಸ್‌ಗಳನ್ನು ಆಲಿಂ ಕೋರ್ಸ್‌ನೊಂದಿಗೆ ನೀಡಲಾಗುವುದು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಊಟ, ವಸತಿ ಸೌಕರ್ಯ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಅಲ್ ಅಝ್ಹರಿಯಾ ಮದ್ರಸ ಕಚೇರಿಯನ್ನು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಉಪಾಧ್ಯಕ್ಷ ಹಾಜಿ ಎಸ್.ಎಂ.ರಶೀದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಅಥವಾ 9845577827 ಅಥವಾ 0824-2441641 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





